ಅಧಿವೇಶನದಿಂದ ಸಂಸದರ ಅಮಾನತಿಗೆ ಖಂಡನೆ: ನಗರದಲ್ಲಿ ಎಸ್‌ಡಿಪಿಐ ಪ್ರತಿಭಟನೆ

Protest by SDPI workers mandya
Published on

ಮಂಡ್ಯ: ಸಂಸತ್ ಅಧಿವೇಶನದಿಂದ ವಿರೋಧ ಪಕ್ಷದ ಸಂಸದರನ್ನ ಅಮಾನತು ಮಾಡಿರುವುದನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಸರ್‌ಎಂವಿ ಪ್ರತಿಮೆ ಎದುರು ಪ್ರತಿಭಟಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ ಆತ್ಮ ಇದ್ದಂತೆ. ಆಡಳಿತರೂಢ ಪಕ್ಷದ ಪ್ರಾಮುಖ್ಯತೆಯಷ್ಟೇ ವಿರೋಧ ಪಕ್ಷಕ್ಕೂ ಮಹತ್ವ ಇರುತ್ತದೆ. ಹೀಗಿರುವಾಗ ವಿರೋಧ ಪಕ್ಷದ 141 ಸದಸ್ಯರನ್ನು ಅಮಾನತು ಮಾಡಿರುವ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ. ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆ ಮಾಡಿದಂತೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದ ಶೇ.70ರಷ್ಟು ಸದಸ್ಯರನ್ನು ಅಮಾನತು ಮಾಡಿ ಭಾರತದ ನ್ಯಾಯ ಸಂಹಿತೆ ಮರು ವ್ಯಾಖ್ಯಾನ ಮಾಡುವ ಪ್ರಮುಖ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಮಾಡುವ ಸಂಚು ರೂಪಿಸಿಸಲಾಗಿದೆ. ಮಸೂದೆಗೆ ಎದುರಾಗಬಹುದಾದ ಆಕ್ಷೇಪಣೆ, ವಿರೋಧವನ್ನು ಇಲ್ಲವಾಗಿಸುವುದೇ ಪ್ರತಿಪಕ್ಷ ಸದಸ್ಯರ ಅಮಾನತಿನ ದುರುದ್ದೇಶವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್, ಜಿಲ್ಲಾಧ್ಯಕ್ಷ ಸಾದತ್ ಪಾಷಾ, ಪ್ರಧಾನ ಕಾರ್ಯದರ್ಶಿ ಮುಕ್ತಾರ್ ಅಹಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net