

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆ ಕುರಿತು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ವರದಿ ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಾದ್ಯಂತ 20 ಕಡೆಗಳಲ್ಲಿ ಪ್ರತಿಭಟನೆ ನಡೆಸಿತು.
ಪುಂಜಾಲಕಟ್ಟೆ, ಬಂಗೇರಕಟ್ಟೆ, ಕುದ್ರಡ್ಕ, ತೆಕ್ಕಾರು, ಮೂರುಗೋಳಿ, ಇಳಂತಿಲ, ಉಜಿರೆ, ಕಾಜೂರು, ಲಾಯಿಲ, ಕುಂಟಿನಿ, ಪುತ್ರಬೈಲು ಮೊದಲಾದೆಡೆ ಬಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ವೇಣೂರು ಬ್ಲಾಕ್ ವತಿಯಿಂದ ಅಶ್ರಫ್ ಬದ್ಯಾರು ನೇತೃತ್ವದಲ್ಲಿ ಗುರುವಾಯನಕೆರೆ ಜಂಕ್ಷನ್‌ನಲ್ಲಿ, ಉಜಿರೆ ವ್ಯಾಪ್ತಿಯ ಟಿ.ಬಿ ಕ್ರಾಸ್ ಜಂಕ್ಷನ್‌ನಲ್ಲಿ ಕುಂಟಿನಿ ಬ್ರಾಂಚ್ ಸಮಿತಿ ಅಧ್ಯಕ್ಷರಾದ ಆಸೀರ್ ಕುಂಟಿನಿ ನೇತೃತ್ವದಲ್ಲಿ, ಚಾರ್ಮಾಡಿ ಬ್ರಾಂಚ್ ವತಿಯಿಂದ ಸಫ್ವಾನ್ ಅಧ್ಯಕ್ಷತೆಯಲ್ಲಿ ಕಕ್ಕಿಂಜೆಯಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಸಮಿತಿ ಸದಸ್ಯರಾದ ನವಾಜ್ ಕಟ್ಟೆ, ಪಂ.ಸದಸ್ಯರುಗಳಾದ ಮುಸ್ತಾಫ ಜಿ. ಕೆರೆ, ನಿಜಾಮ್ ಕಟ್ಟೆ, ಕ್ಷೇತ್ರ ಕೋಶಾಧಿಕಾರಿ ಸ್ವಾಲಿ ಮದ್ದಡ್ಕ, ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಸಹಲ್ ನಿರ್ಸಾಲ್, ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ, ನಾಯಕರಾದ ಫಝಲ್ ಉಜಿರೆ, ಮಾರ್ಷ ಉಜಿರೆ, ಬ್ಲಾಕ್ ಸಮಿತಿ ಸದಸ್ಯ ಅಶ್ರಫ್ ಚಾರ್ಮಾಡಿ, ಪಂ.ಸದಸ್ಯರುಗಳಾದ ಸಿದ್ಧಿಕ್ ಯು.ಪಿ, ಮನ್ಸೂರ್ ಚಾರ್ಮಾಡಿ, ರಹೀಮ್ ಬೀಟಿಗೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಗರಿಕರು par ಉಪಸ್ಥಿತರಿದ್ದರು.