

ಹುಬ್ಬಳ್ಳಿ: ಸಂಘ ಪರಿವಾರದ ವಿರುದ್ಧ ಅವಹೇಳನಕಾರಿ ಪೋಸ್ಟ್ಟ್ಟರ್ ಪ್ರದರ್ಶಿಸಿದ್ದ ಪ್ರಕರಣದಲ್ಲಿ ಎಸ್‌ಡಿಪಿಐ ಕಾರ್ಯಕರ್ತರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಗಫೂರ್ ಕುರಹಟ್ಟಿ ಬಂಧಿತ. ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರೆ, ಚನ್ನಮ್ಮ ವೃತ್ತದ ಬಳಿ ಎಸ್‌ಡಿಪಿಐ ಕಾರ್ಯಕರ್ತರು ಸಂಘ ಪರಿವಾರದ ವಿರುದ್ಧ ಅವಹೇಳನಕಾರಿ ಪೋಸ್ಟರ್ ಪ್ರದರ್ಶಿಸಿದ್ದರು. ಇದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದವರು ಪ್ರತಿಭಟನೆ ಉಪನಗರ ಠಾಣೆಯಲ್ಲಿ ಕುರಹಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಬ್ದುಲ್ ಗಫೂರ್ ಕುರಹಟ್ಟಿಯನ್ನು ಬಂಧಿಸಿದ್ದು, 15 ದಿನಗಳವರೆಗೆ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.