

ಹನುಮಸಾಗರ: ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೆ, ಶಾಲೆಗೆ ಸೇರಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಪಂಪನಗೌಡ ಶಾಂತಗೌಡರ ಸಲಹೆ ನೀಡಿದರು.
ಸಮೀಪದ ಬಿಳೆಕಲ್ಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಹಾಗೂ ಹಾಜರಾತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಒಂದು ಕುಟುಂಬ, ಒಂದು ಗ್ರಾಮ, ಒಂದು ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಇದನ್ನೂ ಓದಿ: ಗುಂಬಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳ್ಳತನ
ಕೆಲ ವಿದ್ಯಾರ್ಥಿನಿಯರು ಇಳಕಲ್ ಸೀರೆಯನ್ನುಟ್ಟು, ತಲೆಯ ಮೇಲೆ ಕುಂಭಗಳನ್ನು ಹೊತ್ತು ಬಂದರೆ, ಇನ್ನೂ ಕೆಲವು ವಿದ್ಯಾರ್ಥಿನಿಯರು ಸ್ವಾತಂತ್ರೃ ಹೋರಾಟಗಾರರ ವಿವಿಧ ವೇಷಭೂಷಣಗಳನ್ನು ತೊಟ್ಟು ಸಾಗಿದ್ದು ವಿಶೇಷ.
ಗ್ರಾಪಂ ಅಧ್ಯಕ್ಷೆ ಕನಕವ್ವ ದಾಸರ್, ಎಸ್ಡಿಎಂಸಿ ಸದಸ್ಯರಾದ ಶ್ರೀಕಾಂತ್ ಓಲೇಕಾರ, ಶರಣಪ್ಪ ಕುಷ್ಟಗಿ, ಗ್ರಾಪಂ ಸದಸ್ಯರಾದ ಶೇಖಪ್ಪ ಕಂಬಳಿ, ಶಿವಾನಂದ ರಾಮಸ್ವಾಮಿ, ಪರಮೇಶ್ವರಪ್ಪ ಕರಡಿ, ಪ್ರಮುಖರಾದ ಯಂಕನಗೌಡ ಪೊಲೀಸ್, ಮಲ್ಲಪ್ಪ ಮೇಲಿನಮನಿ, ಮುಖ್ಯಶಿಕ್ಷಕ ಬಸವರಾಜ ನರಹಟ್ಟಿ, ಟಾಟಾ ಸಂಸ್ಥೆಯ ವೀರೇಶ ಹಂಚಿನಾಳ, ಆನಂದ ಆರ್. ಇತರರಿದ್ದರು.