ಜೂ.21ಕ್ಕೆ ಯೋಗೇಶ್ವರ ಕೃಷ್ಣ್ಣನೆಡೆಗೆ ಯೋಗ ನಡಿಗೆ

udp-sdm
Published on

ಉಡುಪಿ: ಹತ್ತನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂ.21 ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ' ಸೌಖ್ಯವನ' ಸಹಯೋಗದೊಂದಿಗೆ ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳದ ಶಾಂತಿವನ ಟ್ರಸ್ಟ್​ ಕಾರ್ಯದರ್ಶಿ ಬಿ.ಎಸ್​.ಸೀತಾರಾಮ ತೋಳ್ಪಾಡಿತ್ತಾಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 6.30ಕ್ಕೆ ಉಡುಪಿ ಕ್ಲಾಕ್​ಟವರ್​ ಸಮೀಪ ಶಾಸಕ ಯಶ್ಪಾಲ್​ ಸುವರ್ಣ ನಡಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಎಸ್ಪಿ ಡಾ. ಅರುಣ್​, ಸೌಖ್ಯವನ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಉಪಸ್ಥಿತಿಯಲ್ಲಿ 300 ಯೋಗ ಪಟುಗಳೊಂದಿಗೆ ಜಾಥಾ ಕ್ಲಾಕ್​ ಟವರ್​, ಡಯಾನ್​ ಸರ್ಕಲ್​ ಮೂಲಕ ಕೃಷ್ಣಮಠದ ರಥಬೀದಿಯಲ್ಲಿ ಸಾಗಿ ಗೀತಾಮಂದಿರವನ್ನು ತಲುಪಲಿದೆ ಎಂದರು.

ಬೆಳಗ್ಗೆ 7 ಗಂಟೆಗೆಗ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತಿರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಆದರ್ಶ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಜಿ.ಎಸ್​.ಚಂದ್ರಶೇಖರ್​ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ್​ ಪೂಜಾರಿ, ವೈದ್ಯರಾದ ಡಾ. ಶೋಭಿತ್​ ಶೆಟ್ಟಿ, ಡಾ. ಪೂಜಾ ಜಿ., ವ್ಯವಸ್ಥಾಪಕ ಪ್ರವಿಣ್​ ಕುಮಾರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net