ನ.5ಕ್ಕೆ ಎಸ್ ಡಿಎಂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

udp-sdm
Published on

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಆಯುರ್ವೇದ ಕಾಲೇಜು , ಉಡುಪಿಯು ಸುಮಾರು 65 ವರ್ಷಗಳ ಇತಿಹಾಸವಿದ್ದು, ಈಗಿನವರೆಗೆ ಸಾವಿರಾರು ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದು ದೇಶದೆಲ್ಲೆಡೆ ಪ್ರಮುಖ ಆಸ್ಪತ್ರೆಗಳಲ್ಲಿ, ವೈದ್ಯಕಿಯ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇವರೆಲ್ಲರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನ.5-ರಂದು 11 ಗಂಟೆಗೆ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಪ್ರಜ್ಯೋತಿ&-2023 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂದ ಜೊತೆ ಕಾರ್ಯದರ್ಶಿ ಡಾ. ವ್ಯಾಸರಾಜ ತಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದು, ಹಳೆವಿದ್ಯಾರ್ಥಿ ಹಾಗೂ ಮೂಡಬಿದ್ರೆಯ ಆಳ್ವಾಸ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್​ ಆಳ್ವ ಉದ್ಘಾಟಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ 1984&-89ರ ಸಾಲಿನ ಹಳೆ ವಿದ್ಯಾರ್ಥಿ ಸಮೂಹ ಚಿರಂತನ & 1984 ವತಿಯಿಂದ ನಡೆಯುವ ಗುರುವಂದನ ಕಾರ್ಯಕ್ರಮದಲ್ಲಿ ಕಾಲೇಜಿನ ರೋಗನಿದಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ವಿ. ಪ್ರಸನ್ನ ಇವರನ್ನು ಸನ್ಮಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಳೆವಿದ್ಯಾರ್ಥಿಗಳಿಗೆ ವಿಶೇಷ ಸವಲತ್ತುಗಳನ್ನೊಳಗೊಂಡ ಕಾರ್ಡ್​ ವಿತರಿಸಲಾಗುತ್ತದೆ ಎಂದರು.

ಸಭಾನ ಕಾರ್ಯಕ್ರಮ ನಂತರ ಕ್ಲಿನಿಕಲ್​ ಎಪ್ಲಿಕೇಶನ್​ ಆಫ್​ ರಸೌಷಧೀಸ್​ ಇನ್​ ಜನರಲ್​ ಪ್ರಾಕ್ಟೀಸ್​ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಯಾಗಿ 1994 ನೇ ವರ್ಷದ ಹಳೆವಿದ್ಯಾರ್ಥಿ ಬಳ್ಳಾರಿಯ ಶ್ರೀನಿವಾಸ ಕ್ಲಿನಿಕ್​ನ ಡಾ. ಗೋಪಿಕೃಷ್ಣ ಭಾಗವಹಿಸಲಿದ್ದಾರೆ ಎಂದರು.

ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ವೈದ್ಯಕಿಯ ಅಧೀಕ್ಷಕ ಡಾ. ನಾಗರಾಜ ಕೆ.ವಿ., ಸಂದ ಉಪಾಧ್ಯಕ್ಷ ಡಾ. ಎನ್​.ಟಿ.ಅಂಚನ್​, ಪದಾಧಿಕಾರಿಗಳಾದ ಡಾ.ಸಂದೀಪ್​ ಸನಿಲ್​, ಡಾ.ಶ್ರೀನಿಧಿ, ಡಾ. ಸಂದೇಶ್​ ಕುಮಾರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net