ಎಸ್.ಡಿ.ಎಂ. ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ವಿಜೇತರು

Bel_Debate Competition
Published on

ಬೆಳ್ತಂಗಡಿ: ಉಜಿರೆಯ ಎಸ್.ಡಿ.ಎಂ. ಕಾಲೇಜು ಡಿ.ರತ್ನವರ್ಮ ಹೆಗಡೆ ಸ್ಮರಣಾರ್ಥ ‘ಆಧುನಿಕ ತಂತ್ರಜ್ಞಾನ ಸಾಂಸ್ಕೃತಿಕ ಪರಂಪರೆಗೆ ಪೂರಕ/ಮಾರಕ’ ಕುರಿತು ಮಂಗಳವಾರ ಆಯೋಜಿಸಿದ್ದ ಮಂಗಳೂರು ವಿವಿಮಟ್ಟದ ಅಂತರ್ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೀತಾ ಹಾಗೂ ನವ್ಯಶ್ರೀ ಯು. ಪ್ರಥಮ ಸ್ಥಾನ ಗಳಿಸಿದ್ದಾರೆ.

ಉಜಿರೆ ಎಸ್‌ಡಿಎಂ ಬಿ.ಎಡ್. ಕಾಲೇಜಿನ ಫಾತಿಮತ್ ರಜಿಯಾ ಹಾಗೂ ಯಶಸ್ ದ್ವಿತೀಯ ಸ್ಥಾನ ಪಡೆದರು. ಮಂಗಳೂರಿನ ವಿವಿ ಕಾಲೇಜಿನ ವಿದ್ಯಾರ್ಥಿ ಸಂದೀಪ್ ಜೆ.ಸಮೈ ಉತ್ತಮ ಚರ್ಚೆಗೆ ವೈಯಕ್ತಿಕ ಬಹುಮಾನ ಪಡೆದರು. ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು. ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿ ಡಾ.ಕೃಷ್ಣಾನಂದ ಪಿ.ಎಂ, ಪದ್ಮರಾಜ್ ಎನ್, ಡಾ.ಮಾಧವ ಎಂ.ಕೆ. ಉಪಸ್ಥಿತರಿದ್ದರು.

ಪ್ರಥಮ ಬಹುಮಾನವಾಗಿ 10 ಸಾವಿರ ರೂ. ದ್ವಿತೀಯ ಬಹುಮಾನವಾಗಿ 8 ಸಾವಿರ ರೂ. ಮತ್ತು ವೈಯಕ್ತಿಕ ಬಹುಮಾನವಾಗಿ ಐದು ಸಾವಿರ ರೂ. ಗಳನ್ನು ನೀಡಲಾಯಿತು. ಚರ್ಚಾ ಸ್ಪರ್ಧೆಯಲ್ಲಿ 15 ಕಾಲೇಜುಗಳ ತಲಾ ಇಬ್ಬರು ವಿದ್ಯಾರ್ಥಿಗಳು ತಂಡಗಳಾಗಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net