ನೆಟ್‌ಬಾಲ್ ಪಂದ್ಯಾಟದಲ್ಲಿ ಎಸ್‌ಡಿಎಂ ಪ್ರಥಮ

Gur_Netball
Published on

ಗುರುಪುರ: ದಕ್ಷಿಣ ಕನ್ನಡ ಜಿಲ್ಲಾ ನೆಟ್‌ಬಾಲ್ ಸಂಸ್ಥೆ ಹಾಗೂ ಎಡಪದವಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಭಾನುವಾರ ಕಾಲೇಜಿನಲ್ಲಿ ನಡೆದ ಮಿಕ್ಸೆಡ್ ನೆಟ್‌ಬಾಲ್ ಪಂದ್ಯಾಟದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟ ಗಳಿಸಿದೆ. ಮಂಗಳೂರಿನ ಯೆನೆಪೋಯ ಕಾಲೇಜು ತಂಡ ರನ್ನರ್ಸ್‌ ಅಪ್ ಸ್ಥಾನ ಗಳಿಸಿತು.

ಪಂದ್ಯಾಟದಲ್ಲಿ ಒಟ್ಟು 9 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಮೇಘನಾ ಉತ್ತಮ ಶೂಟರ್ ಹಾಗೂ ಚಿಂತನ್ ಉತ್ತಮ ಡಿಫೆಂಡರ್ ಆಗಿ ಹೊರಹೊಮ್ಮಿದ್ದು, ಸುಪ್ರಿತ್ ಉತ್ತಮ ಆಲ್‌ರೌಂಡರ್ ಪ್ರಶಸ್ತಿ ಗಳಿಸಿದರು.

ಎಡಪದವು ಕಾಲೇಜಿನ ಪ್ರಾಂಶುಪಾಲೆ ಗಾಯತ್ರಿ ಪ್ರಶಸ್ತಿ ವಿತರಿಸಿದರು. ಪ್ರೇಮನಾಥ ಶೆಟ್ಟಿ, ನವೀನ್ ಹೆಗ್ಗಡೆ, ಸುದೀನ್, ತುಷಾರ್ ನಿತಿನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net