

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂತ್ರಿ ಮಂಡಲದ ಪದ ಪ್ರದಾನ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಪೊಲೀಸ್ ಇಲಾಖೆಯ ಪರಿವೀಕ್ಷಕ ಮುರಳೀಧರ್ ಕಾರ್ಯಕ್ರಮ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿದರು. ಎಸ್‌ಡಿಎಂ ರಾಜ್ಯದಲ್ಲೇ ಪ್ರಸಿದ್ಧ ಸಂಸ್ಥೆ. ಸಂಸ್ಥೆಯ ಗೌರವವನ್ನು ಉಳಿಸುವಂತಹ ಕೆಲಸ ವಿದ್ಯಾರ್ಥಿಗಳು ಮಾಡಬೇಕು. ಒಳ್ಳೆಯ ಸಂಸ್ಕಾರ , ಸಂಸ್ಕೃತಿ ಸಂಸ್ಥೆಯಿಂದ ದೊರೆಯುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶ್ರೀಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯ ಕುಮಾರ್ ಮಾತನಾಡಿ, ಮತದಾನದ ಪ್ರಕ್ರಿಯೆ ಹಾಗೂ ತಾನು ನಾಯಕನಾಗಿ ಇನ್ನೊಬ್ಬರನ್ನು ನಾಯಕನನ್ನಾಗಿ ಬೆಳೆಸುವ ನಾಯಕತ್ವದ ಗುಣ ವಿದ್ಯಾರ್ಥಿಗಳ ಜೀವನದಲ್ಲಿ ಬೆಳೆಯಬೇಕು. ಉತ್ತಮ ಜೀವನ ಮೌಲ್ಯ, ಹವ್ಯಾಸ, ಸಂಸ್ಕಾರ ಬೆಳೆಸಿಕೊಂಡು ತನ್ನ ಮುಂದಿನ ಜೀವನದ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದರು.
ವಿದ್ಯಾರ್ಥಿ ನಾಯಕನಾಗಿ ಆಯುಷ್ ಕೆ, ಉಪನಾಯಕನಾಗಿ ಜಯದೀಪ್, ಶಿಕ್ಷಣ ಮಂತ್ರಿಯಾಗಿ ಸುಪ್ರೀತ್, ಕ್ರೀಡಾ ಮಂತ್ರಿಯಾಗಿ ಸಮ್ಯಕ್, ಆರೋಗ್ಯ ಮತ್ತು ಶಿಸ್ತು ಮಂತ್ರಿಯಾಗಿ ಸ್ವಿತಾ ಜೈನ್, ಸಾಂಸ್ಕೃತಿಕ ಮಂತ್ರಿಯಾಗಿ ಭೂಮಿಕಾ, ಮಾನವ ಸಂಪನ್ಮೂಲ ಮಂತ್ರಿಯಾಗಿ ಸುವೀನ್ ಆಯ್ಕೆಯಾದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್ ಉಪಸ್ಥಿತರಿದ್ದರು. ಸ್ತವ್ಯ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ದೀಪ್ತ ವಂದಿಸಿದರು. ಚಾರಿತ್ರ ಕಾರ್ಯಕ್ರಮ ನಿರೂಪಿಸಿದರು.