

ಧಾರವಾಡ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಡಿವಿಕಾನ್ ಇಂಡಿಯಾ ಗ್ಲೋಬಲ್ ಡಿಸೈನ್ ಮತ್ತು ಪರಿಶೀಲನಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಸ್‌ಡಿಎಂ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜಿನ ಅಕ್ಷತಾ ರೋಖಡೆ, ಅಮೋಘ ಗುದ್ದಿಮಠ, ಕೆ. ವೆಂಕಟ್ ಅನೀಶ್ ದ್ವಿತೀಯ ರನ್ನರ್‌ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರನ್ನು ಪ್ರಾಚಾರ್ಯ ಡಾ. ಕೆ. ಗೋಪಿನಾಥ ಬುಧವಾರ ಸನ್ಮಾನಿಸಿದರು. ಪ್ರೊ. ವಾಸುದೇವ ಪರ್ವತಿ, ಡಾ. ಎಸ್. ಜೋಶಿ, ಡಾ. ಎಸ್.ವಿ. ವಿರಕ್ತಮಠ, ಡಾ. ಎಸ್.ಎಸ್. ಮಠದ ಇದ್ದರು.