ಎಸ್​ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಗಿಡಮೂಲಿಕೆ ಕಾನನ

udp-3-sdm 1
Published on

ಉಡುಪಿ: ಉದ್ಯಾವರ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ 7 ಎಕ್ರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಗಿಡಮೂಲಿಕೆ ಕಾನನ ಜಿಲ್ಲೆಯ ಅಮೂಲ್ಯ ಸಸ್ಯ ಸಂಪತ್ತಾಗಿದೆ.

65 ವರ್ಷಗಳಿಂದ ನಾಡಿನ ಸಾವಿರಾರು ಆಯುರ್ವೇದ ವೈದ್ಯರನ್ನು ನೀಡಿದ ಈ ಕಾಲೇಜು ಇಪ್ಪತ್ತೊಂದು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಇದರಲ್ಲಿ ಒಟ್ಟು ಏಳು ಎಕರೆಯಲ್ಲಿ ಚರಕವನ, ಸುಶ್ರುತವನ, ರಾಶಿವನ, ನಕ್ಷತ್ರವನ, ರಾಜವನ ಎಂಬ ವಿವಿಧ ಮೂಲಿಕಾವನಗಳನ್ನು ಪೋಷಿಸಿಲಾಗುತ್ತಿದ್ದು, 495ಕ್ಕಿಂತಲೂ ಹೆಚ್ಚಿನ ವಿವಿಧ ಜಾತಿಯ, 5 ಸಾವಿರಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ.

ಒಂದು ಎಕರೆ ಜಾಗದಲ್ಲಿ ವಿದ್ಯಾಲಯದ ನೈರುತ್ಯ ಮೂಲೆಯಲ್ಲಿರುವ ರಾಜವನದಲ್ಲಿ ಸುಮಾರು 342 ವಿವಿಧ ಕುಲಗಳ ಒಟ್ಟು 1203 ಔಷದೀಯ ಗಿಡಗಳನ್ನು ಹೊಂದಿರುವುದು ಇದರ ವೈಶಿಷ್ಟ$್ಯತೆ. ದೊಡ್ಡ ಮರಗಳು, ಬಳ್ಳಿಗಳು, ಚಿಕ್ಕ ಗಿಡಗಳು, ಹುಲ್ಲು ಹಾಸು, ಹಸಿರು ಪೂದೆಗಳು, ಉದ್ದದ ಬೆತ್ತದ ಹಿಂಡು ಮುಂತಾದ ವೈವಿಧ್ಯತೆಯ ಗಿಡಗಳನ್ನು ಹೊಂದಿದೆ. ಇದರ ಒಳಗಡೆ ಪ್ರವೇಶಿಸಿದರೆ ಪಶ್ಚಿಮ ಘಟ್ಟದ ಅರಣ್ಯದಲ್ಲಿ ಪ್ರವೇಶಿಸದಂತೆ ಭಾಸವಾಗುತ್ತದೆ. 30 ರಿಂದ 40 ವರ್ಷಕ್ಕೂ ಹೆಚ್ಚಿನ ಅಸನ್ನಹೊಂಗೆ, ಮಧುಕ, ಕುಟುಜ, ಕುಂಭಿ ಮುಂತಾದ ಔಷಧೀಯ ಮರಗಳು ಪ್ರಕೃತಿಪ್ರಿಯರ ಮನಸೂರೆಗೊಳಿಸುತ್ತಿದೆ.

ಜಾನಪದೀಯ ಸಸ್ಯಗಳು
ಆಯುರ್ವೇದ ಶಾಸ್ತ್ರಗಳಲ್ಲಿ ಉಲ್ಲೇಖಿಸಿದ ಗಿಡಗಳಲ್ಲದೆ ಜನಪದ ವೈದ್ಯಕಿಯ ಶಾಸ್ತ್ರದಲ್ಲಿ ಉಪಯೋಗಿಸುವ ಏಕನಾಯಕಿ, ಚಿಟಿಕೆ ಗಿಡ, ಮಡಿವಾಳ ಸೊಪು$್ಪ ಮುಂತಾದವುಗಳನ್ನು ನೋಡಬಹುದು. ಮಡಿವಾಳ ಸೊಪ್ಪು ಎಲೆಗಳನ್ನು, ಜಾನಪದ ವೈದ್ಯರು ಸೊಂಟ ನೋವಿನಲ್ಲಿ ವಿವಿಧ ಕಷಾಯ, ದೋಸೆ, ಚಟ್ನಿಯ ರೂಪದಲ್ಲಿ ಉಪಯೋಗಿಸುತ್ತಾರೆ. ನಾಗಬೆತ್ತ ಎನ್ನುವ ಅಪರೂಪದ ಮುಳ್ಳಿನ ಭತ್ತವು ಇಲ್ಲಿ ದೊಡ್ಡ ಹಂದರದ ರೂಪದಲ್ಲಿ ಟೊಂಗೆಗಳನ್ನು ಪಸರಿಸಿ ಕೆಲವು ಬಳ್ಳಿಗಳಿಗೆ ಆಶ್ರಯ ತಾಣವಾಗಿದೆ. ಹಾವಿನ ಹುತ್ತ, ಮಣ್ಣಿನ ದಿಬ್ಬ, ಇಂಗು ಗುಂಡಿ, ತಗ್ಗಿನ ಪ್ರದೇಶ ನೈಸರ್ಗಿಕ ವೈವಿಧ್ಯಗಳ ಆಶ್ರಯ ತಾಣವಾಗಿದೆ.

ವಿವಿಧ ಫಲನೀಡುವ ಮರಗಳಾದ ಅಣಿಲೆಕಾಯಿ, ಅಮಟೆಕಾಯಿ, ಶಾಂತಿ, ಕಾಯಿ, ಗಾಳಿ ಮರ,ಹೊಂಗೆ ಮುಂತಾದ ಬೃಹದಾಕಾರದ ಮರಗಳಿವೆ. ಆಯುರ್ವೇದ ವೈದ್ಯಕಿಯ ವಿದ್ಯಾರ್ಥಿಗಳು ಈ ವನದ ಸಸ್ಯಗಳನ್ನು ಆಸ್ಪತ್ರೆಯ ರೋಗಿಗಳ ಕಷಾಯ, ಎಣ್ಣೆ, ಲೇಪ ಮುಂತಾದವುಗಳ ಪ್ರಯೋಗಿಕ ತಯಾರಿಕೆಗೆ, ಏಕಮೂಲಿಕೆ ಪ್ರಯೋಗಗಳಿಗೆ, ವಿವಿಧ ಸಸ್ಯ ಶಾಸ್ತ್ರೀಯ ಅಧ್ಯಯನಕ್ಕೆ ಉಪಯೋಗಿಸುತ್ತಾರೆ. 20 ಅಡಿ ಎತ್ತರದ ಹಾಲೆ ಮರದ ಕತ್ತೆಯನ್ನು ಪ್ರತಿವರ್ಷ ಆಟಿ ಅಮಾವಾಸ್ಯೆ ಕಷಾಯಕ್ಕೆ ಬಳಸಲಾಗುತ್ತದೆ.

ಆಸ್ಪತ್ರೆಯ ತ್ಯಾಜ್ಯನಿರಿನ ಮರುಬಳಕ ಮಾಡಿ ಇಲ್ಲಿಯ ಗಿಡಗಳಿಗೆ 365 ದಿನಗಳಲ್ಲಿಯೂ ಹನಿ ನೀರಾವರಿ ಪದ್ಧತಿ ಮೂಲಕ ನೀರು ಸಿಂಪಡಿಸಲಾಗುತ್ತದೆ. ತರಗಲೆಗಳನ್ನು ಸಂಗ್ರಹಿಸಿ ಸಾವಯಾವ ಗೊಬ್ಬರ ತಯಾರಿಸಿ ಗಿಡಗಳ ಫಲವತ್ತತೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಅಳಿವಿನಂಚಿನ ಗಿಡಗಳ ಸಂರಕ್ಷಣೆಆಯುರ್ವೇದ ಶಾಸ್ತ್ರದಲ್ಲಿ ಗಿಡಮೂಲಿಕೆಗಳನ್ನೇ ಆಹಾರ ಹಾಗೂ ಔಷಧಿಯ ರೂಪದಲ್ಲಿ ಬಳಸುವುದರಿಂದ ಅಳಿವಿನಂಚಿನಲ್ಲಿರುವ 50ಕ್ಕೂ ಹೆಚ್ಚು ಪ್ರಭೇದದ ವಿವಿಧ ಸಸ್ಯಗಳಾದ ಅಶೋಕ, ರೋಹಿತಕ, ಭದ್ರಾಕ್ಷ, ಶಾಖೋಟಕ, ಮೇಧಾಸಕ ಮುಂತಾದವುಗಳನ್ನು ಇಲ್ಲಿ ಬೆಳಸಿ ಕಾಪಾಡಲಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಕುಂಕುಮದ ಮರ(ಮೆಲೋಟಸ್​ ಫಿಲಿಪೈನನ್ನಿಸ್​) ರೆಂಬೆಗಳನ್ನು ಚಾಚಿ ಕೆಂಪು ವರ್ಣದ ಧೂಳನ್ನು ಬೀಳಿಸುತ್ತಿದೆ. ಕೆಂಪು ವರ್ಣದ ಪಿಪ್ಪಲಿ, 20 ಅಡಿ ಉದ್ದದ ಏಕನಾಯಕಿ, 3 ಜಾತಿಯ ಸರ್ಪಗಂಧ, ಚರ್ಮದ ಕಾಯಿಲೆಗಳಲ್ಲಿ ಉಪಯೋಗಿಸುವ ತುವರಕ ಎನ್ನುವ ಅಳಿವಿನಂಚಿನಲ್ಲಿರುವ ಮರವನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net