

ಬೆಳಗಾವಿ: ಇಲ್ಲಿನ ಬೆಳಗಾವಿ ತಾಲೂಕು ತಹಸೀಲ್ದಾರ ಕೊಠಡಿಯಲ್ಲಿಯೇ ಎಸ್ ಡಿಎ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರುದ್ರಣ್ಣ ಯಡವಣ್ಣವರ (35) ಆತ್ಮಹತ್ಯೆಗೆ ಶರಣಾದ ಎಸ್ ಡಿ ಎ.
ತಾಲೂಕು ತಹಶಿಲ್ದಾರ ಬಸವರಾಜ ನಾಗರಾಳ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆಯಷ್ಟೆ ಸವದತ್ತಿ ತಹಶಿಲ್ದಾರ ಕಚೇರಿಗೆ ವರ್ಗಾವಣೆಗೊಂಡಿದ್ದ ರುದ್ರಣ್ಣ ಬೇಸತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನು. ಆದರೆ, ಆತ್ಮಹತ್ಯೆ ಗೆ ನಿಕರವಾದ ಕಾರಣ ತಿಳಿದು ಬಂದಿಲ್ಲ.