ವಿದ್ಯಾರ್ಥಿಗಳಲ್ಲಿ ನಾಡ ಸಂಸ್ಕೃತಿ ಅರಳಲಿ ಎಸ್.ಸಿ.ಎಸ್ ಸಂಭ್ರಮ-24 ಉದ್ಘಾಟಿಸಿ ಪ್ರಕಾಶ್ ತುಮಿನಾಡು ಅಭಿಮತ

mng--23 ApriL SCS College
Published on


ಮಂಗಳೂರು: ನಮ್ಮ ನಾಡಿನ ಸಂಸ್ಕೃತಿ ಶ್ರೀಮಂತವಾದುದು. ಪ್ರಾದೇಶಿಕವಾಗಿ ಭಿನ್ನತೆಯಿದ್ದರೂ ಆಯಾಯ ಪ್ರಾದೇಶಿಕ ಕಲೆಗಳ ಸೌಂದರ್ಯ ಅನುಪಮವಾದುದು. ನಮ್ಮ ನಾಡಿನ ಪ್ರಾಚೀನ ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮತ್ತು ಅರಳಿಸುವ ಕಾಯಕದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಚಲನ ಚಿತ್ರ ನಟ ಪ್ರಕಾಶ್ ತುಮಿನಾಡು ಅಭಿಪ್ರಾಯ ಪಟ್ಟರು.


ಅವರು ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕೂಟ ಸಂಗಮ-24 ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು , ನಾಡಿನ ಆದರಣೀಯ ಸರ್ವ ಕಲೆಗಳು ಸರ್ವ ಮನೆಗಳ, ಸರ್ವ ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸುವಂತಾಗಬೇಕು. ಅಲ್ಲದೆ ಮುಖ್ಯವಾಗಿ ನಾಡ ಕಲೆಗಳ ಉಳಿಯುವಿಕೆಗಾಗಿ ನಾಡಿನ ಎಲ್ಲಾ ವಿಶ್ವ ವಿದ್ಯಾ ನಿಲಯಗಳು ಪ್ರಯತ್ನ ಪಡಬೇಕು ಎಂದರು.


ಸಂಸ್ಥೆಯ ಅಧ್ಯಕ್ಷರಾದ ಡಾ. ರಜನೀಶ್ ಸೊರಕೆಯವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್ ನ್ಯಾಶನಲ್ ಅಕಾಡೆಮಿಯ ಪ್ರಾಂಶುಪಾಲರಾದ ಹೆಲೆನ್ ಲೋಬೋ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಲೊಲಿಟಾ ಡಿಸೋಜ, ಪದವಿ ಪೂರ್ವ ಕಾಲೇಜಿನ ಕಲಾವತಿ ಹಾಗೂ ಕಾರ್ಯಕ್ರಮ ಸಂಚಾಲಕರಾದ ಪ್ರೊ.ಸುಚಿತ್ರಾ, ಪ್ರೊ.ಪ್ರಗತಿ ಉಪಸ್ಥಿತರಿದ್ದರು.


ಪ್ರೊ.ಚರಿತಾ ಅವರು ಸ್ವಾಗತಿಸಿದರು. ಪ್ರೊ.ವಿಶ್ವಾತ್ಮಿಕಾ ನಿರೂಪಿಸಿದರು. ಪ್ರೊ.ಪ್ರಾರ್ಥನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net