ಬದುಕಿಗೆ ಗ್ರಂಥ, ಸಂದೇಶಗಳು ಮಾರ್ಗದರ್ಶಕ

tlk 23-2
ತಾಳಿಕೋಟೆ ಜಮಾತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ ಏರ್ಪಡಿಸಲಾದ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಹ್ಮದ್ ಕುಂಞ ಮಾತನಾಡಿದರು. ಚನ್ನವೀರ ಶಿವಾಚಾರ್ಯರು, ಶಾಸಕ ರಾಜುಗೌಡ ಪಾಟೀಲ, ಗುರುಲಿಂಗ ಶಿವಾಚಾರ್ಯರು ಇತರರಿದ್ದರು.
Published on

ತಾಳಿಕೋಟೆ: ಶರಣರು, ದಾರ್ಶನಿಕರು ಎಲ್ಲರೂ ಮಾತನಾಡಿರುವುದು ಯಶಸ್ವಿ ಜೀವನ ಬಗ್ಗೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹ್ಮದ್ ಕುಂಞ ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟೆ ಘಟಕದಿಂದ ಶ್ರೀ ಶರಣ ಮುತ್ಯಾರ ಮಂದಿರದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 3ನೇ ದಿನದ ಸಾರ್ವಜನಿಕ ಕುರಾನ್ ಪ್ರವಚನದಲ್ಲಿ ಯಶಸ್ವಿ ಜೀವನ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಗ್ರಂಥ, ಸಂದೇಶಗಳು ಅತ್ಯಂತ ನೇರ ಬೆಳಕಿನ ಕಡೆಗೆ ಕೊಂಡ್ಯೊಯುತ್ತವೆ ಎಂದು ಕುರಾನ್ ಹೇಳುತ್ತದೆ. ಮನುಷ್ಯನಿಗೆ ವಿಜಯದ ಮಾರ್ಗ ತೋರಿಸಿಕೊಡುವ ಕಾರ್ಯ ಮಾಡುತ್ತವೆ. ನಾನು ಯಾರು? ಎಲ್ಲಿಂದ ಬಂದಿದ್ದೇನೆ? ಬದುಕಿನ ಸಂದೇಶ ಏನೆಂಬುದನ್ನು ಕಂಡುಕೊಳ್ಳಲು ಹಾಗೂ ಇದರಲ್ಲಿ ವಿಜಯ, ಸೋಲು ಅಡಗಿದೆ ಎಂಬುದು ಅರ್ಥೈಸಿಕೊಳ್ಳಲಾಗುತ್ತದೆ ಎಂದರು.

ಕುಂಟೋಜಿ ಹಿರೇಮಠದ ಶ್ರೀ ಚನ್ನವೀರ ಶಿವಾಚಾರ್ಯರು ಮಾತನಾಡಿ, ಭಾರತ ದೇಶದಲ್ಲಿನ ಪ್ರತಿಯೊಬ್ಬರ ರಕ್ತದ ಬಣ್ಣ ಒಂದೇಯಾಗಿದೆ. ಆದ್ದರಿಂದ ಮಾನವೀಯ ತತ್ವ ಒಂದೇ ಎಂದು ಭಾವಿಸಬೇಕಿದೆ. 21ನೇ ಶತಮಾನ ಜಾಗತಿಕರಣ ಶತಮಾನವಾಗಿದೆ. ಮುಸ್ಲಿಮರು ಶಾಂತಿಪ್ರಿಯರಾಗಿದ್ದಾರೆ. ನನ್ನ ದೇಶ ನನ್ನ ಜನ ಎಂಬ ತತ್ವ ಇಟ್ಟುಕೊಳ್ಳಬೇಕು ಎಂದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಸರ್ವಧರ್ಮಿಯರ ಕಾರ್ಯಕ್ರಮ ಇದಾಗಿದ್ದು, ಹಿಂದಿನ ಕಾಲದ ಸ್ಥಿತಿಗತಿ ಬಹಳ ತೊಂದರೆದಾಯಕವಾಗಿತ್ತು. ಇಂದಿನ ಕಾಲದಲ್ಲಿ ಎಲ್ಲ ಸೌಕರ್ಯಗಳಿದ್ದರೂ ನೆಮ್ಮದಿಯಿಂದ ವಂಚಿತರಾಗಿದ್ದೇವೆ. ಹಿಂದಿನ ಕಾಲದಲ್ಲಿ ದೃಢ ಭಕ್ತಿ ಇತ್ತು, ಅಂತಹ ಭಕ್ತಿ ಇಂದಿನ ದಿನಮಾನದಲ್ಲಿ ಕಾಣಿಸುತ್ತಿಲ್ಲ ಎಂದರು.

ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಪ್ರೊ.ಲಾಲಹುಸೇನ ಕಂದಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಡಾ. ಮಹ್ಮದಸಾಬ್ ಬೆಳಗಾಮಿ ಅಧ್ಯಕ್ಷತೆ ವಹಿಸಿದ್ದರು.

ಸಾಂಭಪ್ರಭು ಶರಣಮುತ್ಯಾರ ದೇವಸ್ಥಾನದ ಶರಣಪ್ಪ ಶರಣರು, ವಾಸುದೇವ ಹೆಬಸೂರ, ಎಚ್.ಎಸ್. ಪಾಟೀಲ, ಶ್ರೀಕಾಂತ ಪತ್ತಾರ, ಮುತ್ತಪ್ಪ ಚಮಲಾಪೂರ, ಪ್ರಕಾಶ ಹಜೇರಿ, ಈಶ್ವರಪ್ಪ ಬಿಳೇಭಾವಿ, ಮಹಾಂತೇಶ ಮುರಾಳ, ವೀರೇಶ ಬಾಗೇವಾಡಿ, ಮುದಕಪ್ಪ ಬಡಿಗೇರ, ಶ್ರೀನಿವಾಸ ಸೋನಾರ, ರಾಮಣ್ಣ ಕಟ್ಟಿಮನಿ, ಮಾಸುಮಸಾ ಕೆಂಭಾವಿ, ಮೋಸಾ ಕೆಂಭಾವಿ, ನಬಿರಸೂಲ್ ಲಾಹೋರಿ, ಇಮಾಮಹುಸೇನ್ ಕಾಳಗಿ, ಶಮೀರ್ ಶಹುಪುರಿ, ಬಸೀರ್ ಹಂಡೆಭಾಗ ಒಳಗೊಂಡು ಅಸಂಖ್ಯಾತ ಹಿಂದು- ಮುಸ್ಲಿಮರು ಪಾಲ್ಗೊಂಡಿದ್ದರು.

ಮಹ್ಮದ್‌ಈಸ್ೂ ಡೋಣಿ ಕುರಾನ್ ಪಠಿಸಿದರು. ಸೋಯಬ್ ಕೊರ್ತಿ ಸ್ವಾಗತಿಸಿದರು. ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟೆ ಘಟಕದ ಅಧ್ಯಕ್ಷ ಮುಜಾಹಿದ್ ಜಮಾಜಕಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net