

ಉಡುಪಿ: ನಾಪ್ತಾಲ್ ಕಂಪೆನಿಯ ಸ್ಕ್ರಾಚ್ ವಿನ್‌ನಲ್ಲಿ ಬಹುಮಾನ ಬಂದಿದೆ ಎಂದು ನಂಬಿಸಿ ಮಹಿಳೆಯಿಂದ 15 ಲಕ್ಷ ರೂ. ವಸೂಲಿ ಮಾಡಿ ಮೋಸ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ಣಿಮಾ ಎಂಬವರಿಗೆ ಮೇ ತಿಂಗಳಲ್ಲಿ ಪೋಸ್ಟ್ ಮೂಲಕ ಕೂಪನ್ ಬಂದಿದ್ದು, ಅದರಲ್ಲಿ 14.80 ಲಕ್ಷ ರೂ. ವಿಜೇತರಾಗಿರುವ ನಮೂದಿಸಲಾಗಿತ್ತು. ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಬಹುಮಾನ ಮೊತ್ತ ಪಡೆಯಲು ಜಿಎಸ್‌ಟಿ, ಸರ್ವಿಸ್ ಜಾರ್ಚ್ ಇತ್ಯಾದಿ ನೀಡಬೇಕಾಗುತ್ತದೆ ಎಂಬುದಾಗಿ ನಂಬಿಸಿದ ಖದೀಮರು ಮೇ 20 ರಿಂದ ಜುಲೈ 12ರ ಅವಧಿಯಲ್ಲಿ ಒಟ್ಟು 15.33 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಜಮೆ ಮಾಡಿಸಿಕೊಂಡಿದ್ದಾರೆ.