ಸಂಯಮ ವೃದ್ಧಿಗೆ ಸ್ಕೌಟ್ಸ್ ಸಹಕಾರಿ

14MDG1 SKOUT
Published on

ಮುಂಡರಗಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಸದಾ ಶಿಸ್ತು ಮತ್ತು ಸಂಯಮ ಬೆಳೆಸುತ್ತದೆ. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರನನ್ನಾಗಿಸಲು ಸಹಕಾರಿಯಾಗುತ್ತದೆ. ಜತೆಗೆ ಸೇವಾ ಮನೋಭಾವ ಕಲಿಸಿಕೊಡುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಸ್. ಪೂಜಾರ ಹೇಳಿದರು.

ತಾಲೂಕಿನ ಶಿವಾಜಿನಗರ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲೆಯ ನೇತಾಜಿ ಸುಭಾಸಚಂದ್ರ ಬೋಸ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸರ್ಕಾರದಿಂದ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಕಾರ್ಯಗಳಿಗೆ ಗ್ರಾಮಸ್ಥರು ಕೈಜೋಡಿಸಿದರೆ ಎಲ್ಲ ಕೆಲಸ ಸುಲಭವಾಗಿ ನಡೆಯುತ್ತವೆ ಎಂದರು. ಶಿವಾಜಿನಗರ ಗ್ರಾಪಂ ಅಧ್ಯಕ್ಷೆ ಮೀರಾಬಾಯಿ ಲಮಾಣಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯೆ ಶಕುಂತಲಾ ಚವ್ಹಾಣ, ಜಿಲ್ಲಾ ಸಂಘಟನಾ ಆಯುಕ್ತ ಎ.ಎಸ್. ಶಿವಕುಮಾರ, ತಾಲೂಕು ಕಾರ್ಯದರ್ಶಿ ಜಗದೀಶ ಗುಳ್ಳಾರಿ, ಜಿಲ್ಲಾ ತರಬೇತಿ ಸಲಹೆಗಾರ ಎಂ.ಪಿ. ಶೀರನಹಳ್ಳಿ, ಉಮೇಶ ಗಂಗಾಪುರ, ಇತರರಿದ್ದರು. ಮುಖ್ಯಶಿಕ್ಷಕ ಎಲ್.ಆರ್. ಪವಾರ ಸ್ವಾಗತಿಸಿ, ಶಿಕ್ಷಕ ಎಚ್.ಎಂ. ಹದ್ಲಿ ನಿರೂಪಿಸಿ, ಶಿಕ್ಷಕ ಜಗದೀಶ ಪತ್ತಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net