

ಬೆಳ್ತಂಗಡಿ: ಸ್ಕೌಟ್ಸ್ ಸಂಸ್ಥೆಯ ಸಮಾಜಮಖಿ ಕಾರ್ಯಗಳಿಂದ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಪರಿಚಯಿಸುತ್ತಿದೆ ಎಂದು ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಹಾಗೂ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಆಶ್ರಯದಲ್ಲಿ ದ್ವಿತೀಯ, ತೃತೀಯ ಸೋಪಾನ ಪರೀಕ್ಷೆ ಬರೆಯುವ ಕಬ್ಸ್, ಬುಲ್‌ಬುಲ್, ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಹಾಯಕ ಆಯುಕ್ತ ಬಿ.ಸೋಮಶೇಖರ್ ಶೆಟ್ಟಿ ಮಾತನಾಡಿದರು. ವಿನೋದ್ ಕಾಸರಗೋಡು, ಕವಿತಾ, ಸೇವಂತಿ, ಪ್ರಸಾದ್ ಆಚಾರ್ಯ ತರಬೇತುದಾರರಾಗಿ ಭಾಗವಹಿಸಿದ್ದರು. ಮುಖ್ಯಶಿಕ್ಷಕಿ ಪರಿಮಳ ಎಂ.ವಿ. ಅಧ್ಯಕ್ಷತೆ ವಹಿಸಿದ್ದರು. ಗೈಡ್ಸ್ ಕ್ಯಾಪ್ಟನ್ ಗೀತಾ ಕೆ. ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ವಂದಿಸಿದರು. ಕಬ್ ಮಾಸ್ಟರ್ ಅಮೃತ ವಿ.ಶೆಟ್ಟಿ ಅತಿಥಿ ಪರಿಚಯ ಮಾಡಿದರು. ಪ್ಲಾಕ್ ಲೀಡರ್ ಸೌಮ್ಯಾ ಹಾಗೂ ಕಬ್ ಮಾಸ್ಟರ್ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆಗಳಿಂದ 576 ವಿದ್ಯಾರ್ಥಿಗಳು ಹಾಗೂ 25 ಶಿಕ್ಷಕರು ಭಾಗವಹಿಸಿದ್ದರು.