

ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ, ಜೊಲ್ಲೆ ಎಜುಕೇಷನ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸ್ಥಳೀಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೊಲ್ಲೆ ಎಜುಕೇಷನ್ ಸೊಸೈಟಿಯ ವಿವಿಧ ಅಂಗ ಸಂಸ್ಥೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೆಳವರ್ಗದವರಿಗೆ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯಆಯುಕ್ತ ಗಜಾನನ ಮನ್ನಿಕೇರಿ ಮಾತನಾಡಿದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ನಿರಂತರ ಓದು, ಗುರಿ ಹಾಗೂ ದೃಢವಾದ ಆತ್ಮವಿಶ್ವಾಸ ಇಟ್ಟುಕೊಂಡು ಧನಾತ್ಮಕವಾಗಿ ಸದಾ ಮುನ್ನುಗ್ಗುತ್ತಿರಬೇಕು ಎಂದರು.
ಈಚೆಗೆ ಸಿಎ ಪರೀಕ್ಷೆಯಲ್ಲಿ ಪಾಸಾದ ಶಿವಶಂಕರ ಜೊಲ್ಲೆ ಕನ್ನಡ ಶಾಲೆಯ ಹಳೆಯ ವಿದ್ಯಾರ್ಥಿ ಸಾಜೀದ್ ಅಸ್ಲಂ ಜಮಾದಾರಗೆ ಸನ್ಮಾನಿಸಲಾಯಿತು. ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್ಟ, ಎನ್.ಜಿ.ಪಾಟೀಲ, ವಿಠ್ಠಲ ಎಸ್.ಬಿ., ಎಸ್.ಬಿ.ಚೌಗಲೆ, ಸಂಸ್ಥೆಯ ಸಂಯೋಜನಾಽಕಾರಿ ಎಂ.ಎಂ.ಪಾಟೀಲ, ಮುಖ್ಯಶಿಕ್ಷಕ ವಿ.ಆರ್.ಭಿವಸೆ, ಪ್ರಾಚಾರ್ಯರಾದ ನಂದಾ ಚುನುಮರಿ, ವಿಜಯ ನಾಯಿಕ ಇತರರಿದ್ದರು.