ಶಿಸ್ತುಬದ್ಧ ಜೀವನಕ್ಕೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಕಾರಿ

ರಕ್ತದಾನ ಶಿಬಿರವನ್ನು ಕಾರ್ಯಕ್ರಮ 1
ಭೈರಾಪುರದ ಬೆಥಸ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಲೂರು ಸ್ಕೌಟ್ಸ್ ಹಾಗೂ ಗೈಡ್ಸ್ ಮಕ್ಕಳ ತೃತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಹಾಸನ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿ ಸುರೇಶ್ ಗುರೂಜಿ ಉದ್ಘಾಟಿಸಿದರು. ಎಂ.ಬಾಲಕೃಷ್ಣ, ಎಚ್.ಜಿ.ಕಾಂಚನಮಾಲಾ, ಎಚ್.ಎಂ.ಪ್ರಿಯಾಂಕಾ, ಎಂ.ಎಸ್. ಪ್ರಕಾಶ್ ಇತರರು ಇದ್ದರು.
Published on

ಆಲೂರು: ಭಾರತ್ ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ರೂಪಿಸುವುದರ ಜತೆಗೆ ಅವರಲ್ಲಿ ಜೀವನ ಕೌಶಲಗಳನ್ನು ವೃದ್ಧಿಸುತ್ತದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.


ತಾಲೂಕಿನ ಭೈರಾಪುರದ ಬೆಥಸ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಹಾಗೂ ಸ್ಥಳೀಯ ಸಂಸ್ಥೆ ಆಲೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಲೂರು ಸ್ಕೌಟ್ಸ್ ಹಾಗೂ ಗೈಡ್ಸ್ ಮಕ್ಕಳ ತೃತೀಯ ಸೋಪಾನ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಹಂತದ ಪರೀಕ್ಷಾ ಶಿಬಿರದಲ್ಲಿ ತೃತೀಯ ಸೋಪಾನ ಪರೀಕ್ಷೆಗೆ ಸಂಬಂಧಿಸಿದಂತೆ ಲಿಖಿತ ಹಾಗೂ ಮೌಖಿಕ ಪ್ರಶ್ನೆಗಳನ್ನು ಕೇಳಲಾಗುವುದು. ಸಮರ್ಥವಾಗಿ ಉತ್ತರಿಸಿ ಉತ್ತೀರ್ಣರಾಗಿ ರಾಜ್ಯ ಸಂಸ್ಥೆ ಹಮ್ಮಿಕೊಳ್ಳುವ ರಾಜ್ಯ ಪುರಸ್ಕಾರ್ ಪರೀಕ್ಷಾ ಶಿಬಿರಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳ ಸಂಖ್ಯೆ ಅಧಿಕವಾಗಿದ್ದಾಗ ಜಿಲ್ಲಾ ಹಂತದ ಪರೀಕ್ಷಾ ಶಿಬಿರಗಳನ್ನು ಸ್ಥಳೀಯ ಸಂಸ್ಥೆಗಳು ಹಮ್ಮಿಕೊಳ್ಳುವುದರಿಂದ ಆಯಾಯ ತಾಲೂಕಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಕೊಟ್ರೇಶ್ ಎಸ್.ಉಪ್ಪಾರ್ ಆಲೂರು ತಾಲೂಕು ಕಾರ್ಯದರ್ಶಿಯಾದ ನಂತರ ತಾಲೂಕಿನಲ್ಲಿ ಸ್ಕೌಟ್ಸ್ ಗೈಡ್ಸ್ ತುಂಬಾ ಕ್ರಿಯಾಶೀಲವಾಗಿ ನಡೆಯುತ್ತಿದೆ. ಯುನಿಟ್ ಹಾಗೂ ಮಕ್ಕಳ ಸಂಖ್ಯೆಯೂ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ಎಂ.ಎಸ್. ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಹಾಯಕ ಆಯುಕ್ತೆ ಎಚ್.ಎಂ.ಪ್ರಿಯಾಂಕಾ, ಜಿಲ್ಲಾ ಖಜಾಂಚಿ ರಮೇಶ್, ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲಾ, ತಾಲೂಕು ಕಾರ್ಯದರ್ಶಿ ಎಂ.ಬಾಲಕೃಷ್ಣ, ಸ್ಕೌಟ್ ಮಾಸ್ಟರ್ ಪಿ.ಚಂದ್ರು, ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯಾ, ಗೈಡ್ ಕ್ಯಾಪ್ಟನ್‌ಗಳಾದ ಶಿಲ್ಪಾಕೃತಿ ಹಾಗೂ ಶ್ರುತಿ ಸೇರಿದಂತೆ ಬೆಥಸ್ಥ ಶಾಲೆಯ 67 ವಿದ್ಯಾರ್ಥಿಗಳು, ಮರಸು ಹೊಸಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ 34 ವಿದ್ಯಾರ್ಥಿಗಳು, ತಾಳೂರು ಶಾಲೆಯ 4 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net