

ಗಂಗಾವತಿ: ಸುಶಿಕ್ಷಿತ ನಾಗರಿಕರಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಪೂರಕ ಮತ್ತು ಶಿಸ್ತುಬದ್ಧ ಜೀವನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಿದೆ ಎಂದು ಬಾಲಕರ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ ಹೇಳಿದರು.
ಇದನ್ನೂ ಓದಿ: ಸಮಾಜಮುಖಿ ಕಾರ್ಯಗಳಿಂದಲೇ ಕೆಎಲ್ಇ ಜನಮನ್ನಣೆ ಗಳಿಸಿದೆ
ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೋವರ್ ಘಟಕ ಶನಿವಾರ ಉದ್ಘಾಟಿಸಿ ಮಾತನಾಡಿದರು. ಶಿಬಿರಗಳ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಪರಿಚಯಿಸಲಾಗುತ್ತಿದೆ. ಶಿಸ್ತು ಮತ್ತು ಸಂಯಮ ರೂಢಿಸಿಕೊಳ್ಳಲು ಸಹಕಾರಿಯಾಗಿದೆ. ಯೋಧರಂತೆ ಕರ್ತವ್ಯ ನಿರ್ವಹಿಸುವ ರೋವರ್ ಮತ್ತು ರೇಂಜರ್ ಘಟಕಗಳು ವಿದ್ಯಾರ್ಥಿಗಳ ಭವಿಷ್ಯತ್ವ ರೂಪಿಸಲು ಸಹಕಾರಿಯಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು, ಶಿಬಿರ ಮತ್ತು ಸಮಾಜ ಸೇವೆಯ ಕುರಿತು ಸಂಸ್ಥೆಯ ತಾಲೂಕು ಕಾರ್ಯಕಾರಿ ಮಂಡಳಿ ಸದಸ್ಯರಾದ ಸೈಯ್ಯದ್ ಮಹ್ಮದ್‌ಗುತ್ತಿ, ಯರ‌್ರೆಣ್ಣ ಮಾಹಿತಿ ನೀಡಿದರು. ಜಂಟಿ ಕಾರ್ಯದರ್ಶಿ ಹುಸೇನ್‌ಸಾಬ್ ಮಕನಾಂದಾರ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪನ್ಯಾಸಕರಾದ ನಾಗಪ್ಪ , ರಮೇಶ ಗಬ್ಬೂರ್, ರೋವರ್ ಘಟಕದ ನಾಯಕ, ಜಿ.ಕುಮಾರಸ್ವಾಮಿ ಇತರರಿದ್ದರು.