ನೈಋತ್ಯ ರೈಲ್ವೆಯಿಂದ ವಿಚಕ್ಷಣಾ ಜಾಗೃತಿ ಸಪ್ತಾಹ

New SWR
Published on

ಹುಬ್ಬಳ್ಳಿ : ಇಲ್ಲಿನ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ಕಚೇರಿಯಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ಜರುಗಿತು.

ವಿಚಕ್ಷಣಾ ಜಾಗೃತಿ ವಿಷಯ ಕುರಿತು ಪೋಸ್ಟರ್​ಗಳನ್ನು ಅನಾವರಣಗೊಳಿಸಿ ಹಾಗೂ ಸಿಬ್ಬಂದಿಗೆ ಪ್ರತಿಜ್ಞೆ ಬೋಧಿಸಿ ಮಾತನಾಡಿದ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಸಾಮೂಹಿಕ ಜಾಗರೂಕತೆಯ ಮಹತ್ವದ ಬಗ್ಗೆ ತಿಳಿಸಿದರು.

ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ನಂಬಿಕೆಯ ಮೇಲೆ ಭ್ರಷ್ಟಾಚಾರದ ಹಾನಿಕಾರಕ ಪರಿಣಾಮಗಳ ಕುರಿತು ವಿವರಿಸಿದರು.

ದೈನಂದಿನ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಬೆಳೆಸುವಲ್ಲಿ ಉದೊ್ಯೕಗಿಗಳು, ಮಧ್ಯಸ್ಥಗಾರರು ಮತ್ತು ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕರೆ ನೀಡಿದರು.

ವಲಯದ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ವಿಚಕ್ಷಣಾ ಅಧಿಕಾರಿ ಎ. ಅಣ್ಣಾದೊರೈ, ವಿಚಕ್ಷಣಾ ಜಾಗೃತಿ ಸಪ್ತಾಹದ ಅಂಗವಾಗಿ ಆಯೋಜಿಸಿರುವ ವಿವಿಧ ಚಟುವಟಿಕೆಗಳ ಅವಲೋಕನ ನೀಡಿದರು.

ರೈಲ್ ಸೌಧದ ಸಮಗ್ರತೆ ಉದ್ಯಾನದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಪುಷ್ಪ ನಮನ ಸಲ್ಲಿಸಿದರು.

ಸೈಬರ್ ನೈರ್ಮಲ್ಯ ಮತ್ತು ಭದ್ರತೆ‘ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಸೈಬರ್ ಅಪರಾಧ ತನಿಖಾಧಿಕಾರಿ ಮತ್ತು ಸೈಬರ್ ವಿಧಿವಿಜ್ಞಾನ ತಜ್ಞ ಸಂದೀಪ ಪ್ರಕಾಶಚಂದ ಗಾಡಿಯಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net