ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಕರ್ನಾಟಕ ಗೀತ ಗಾಯನ ಸ್ಪರ್ಧೆ

12GDG08
ಗದಗ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಸಂಸ್ಥೆ ಕಚೇರಿಯಲ್ಲಿ ಜರುಗಿದ ಗೀತ ಗಾಯನ ಕಾರ್ಯಕ್ರಮದಲ್ಲಿ ಜಿ.ಎಲ್​. ಬಾರಟಿಕ್ಕಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಗೀತ ಗಾಯನ ಸ್ಪರ್ಧೆಯು ಮಕ್ಕಳಲ್ಲಿ ದೇಶಾಭಿಮಾನ ಹಾಗೂ ಆಸಕ್ತಿ ಬೆಳೆಸುತ್ತದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಜಿ. ಎಲ್​.ಬಾರಟಿಕ್ಕಿ ಹೇಳಿದರು.
ಗದಗ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಸಂಸ್ಥೆ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳಿಗೆ ಮತ್ತು ಯುವಕರಿಗೆ ಸಂಗೀತ ಕಾರ್ಯಕ್ರಮ ಏರ್ಪಡಿಸುವುದು ಅತ್ಯಗತ್ಯವಾಗಿದೆ. ಕಲೆ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತ. ಇಂತಹ ವಿವಿಧ ಕಾರ್ಯಕ್ರಮಗಳನ್ನು ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯು ಆಗಾ ಮಕ್ಕಳಿಗಾಗಿ ಹಮ್ಮಿಕೊಳ್ಳಬೇಕು ಎಂದರು.
ಜಿ.ಎಚ್​. ಪೂಜಾರ ಮಾತನಾಡಿ, ಗ್ರಾಮಿಣ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಹಂತಗಳಲ್ಲಿ ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳುವುದರಿಂದ ಮಕ್ಕಳ ಪ್ರತಿಭೆಗೆ ವೇದಿಕೆ ರೂಪಿಸಿದಂತಾಗುತ್ತದೆ ಎಂದರು
ಬಿ.ಆರ್​.ಸಿ. ಬಾವಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಸ್ಕೌಟ್​ ವಿಭಾಗದಿಂದ ಹಿರೇವಡ್ಡಟ್ಟಿ ಮುರಾಜಿರ್ ದೇಸಾಯಿ ವಸತಿ ಶಾಲೆಯ ಮಕ್ಕಳು ಪ್ರಥಮ, ಗೈಡ್​ ವಿಭಾಗದಿಂದ ಕೆ.ಎಲ್​.ಇ. ಶಾಲೆ ಮಕ್ಕಳು ಪ್ರಥಮ ಸ್ಥಾನ ಪಡೆದರು.
ಡಿ. ಎಸ್​. ದಾಸರ, ಶಿವಕುಮಾರ ಕುರಿ, ಐ.ವೈ. ತಹಶೀಲ್ದಾರ, ಕೆ. ಆರ್​. ಲಮಾಣಿ, ಎಸ್​. ಕೆ. ಮಠದ, ಗೀತಾ ದೇವಾಂಗಮಠ, ಎ. ಎಸ್​. ನರಗುಂದ ಹಲವರು ಇದ್ದರು. ಜಿ.ಎಚ್​. ಪೂಜಾರ, ಬಿ.ಆರ್​.ಸಿ. ಬಾವಿಕಟ್ಟಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net