ಅಂಕ ಗಳಿಕೆಗೆ ವಿಜಯವಾಣಿ ವಿದ್ಯಾಮಿತ್ರ ಸಹಕಾರಿ

22Belavadi1
filter: 0; fileterIntensity: 0.0; filterMask: 0; hdrForward: 0; highlight: true; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;
Published on

ಮಲ್ಲಮ್ಮನ ಬೆಳವಡಿ: ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ವಿಜಯವಾಣಿಯ ‘ವಿದ್ಯಾರ್ಥಿ ಮಿತ್ರ’ ಸಹಕಾರಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರೊ.ಎ.ಕೆ.ಪಾಟೀಲ ಹೇಳಿದರು.

ಗ್ರಾಮದ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆಯ ವೀರ ರಾಣಿ ಮಲ್ಲಮ್ಮ ಪಪೂ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಎದುರಿಸಬೇಕು. ಶಿಕ್ಷಕರ ಬೋಧನೆ ಗಮನದಲ್ಲಿಟ್ಟುಕೊಂಡು ಶಿಕ್ಷಕರು ಹಾಗೂ ಹೆತ್ತವರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಉತ್ತಮ ಫಲಿತಾಂಶ ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿರುವ ಈರಣ್ಣ ವಾಲಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಚಾರ್ಯ ಮಹಾಂತೇಶ ಉಪ್ಪಿನ ವರದಿ ವಾಚಿಸಿದರು.

ಸಂಸ್ಥೆ ನಿರ್ದೇಶಕ ಎನ್.ಎಂ.ಕರಿಕಟ್ಟಿ, ಮಡಿವಾಳಯ್ಯ ರೋಟ್ಟಯ್ಯನವರ, ಬಸಯ್ಯ ಭೋಜಯ್ಯನವರ, ಅಶೋಕ ಮಾರಿಹಾಳ, ಎಂ.ಜಿ.ಹೊಂಗಲ, ಕಾರ್ಯದರ್ಶಿ ಎಂ.ಎಂ.ಕಾಡೆಷನವರ ಇತರರಿದ್ದರು. ಶಿಕ್ಷಕ ವೀರೇಶ ಕಾಡೇಷನವರ ನಿರೂಪಿಸಿದರು. ಸಿರಿಯಾಳ ಪೂಜೇರ ಸ್ವಾಗತಿಸಿದರು. ಬಿ.ಎಂ.ಬಂಡ್ರೋಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net