

ಉಡುಪಿ: ಮಲ್ಪೆ ಕಲ್ಮಾಡಿಯಲ್ಲಿ ಗುರುವಾರ ಮಧ್ಯಾಹ್ನ ಬ್ರೇಕ್ ವೈಫಲ್ಯದಿಂದ ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಪ್ಪಲತೋಟ ನಿವಾಸಿ, ಕ್ರಿಶ್ಚಿಯನ್ ಹೈಸ್ಕೂಲ್ನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ ಸುವರ್ಣ(75) ಮೃತರು. ಇವರು ಅದಿಉಡುಪಿಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದಾಗ ಕಲ್ಮಾಡಿಯಲ್ಲಿ ಹಿಂದಿನಿಂದ ಬಂದ ಬಸ್ ಬ್ರೇಕ್ ೇಲ್ ಆಗಿ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ಸಿನ ಚಕ್ರದಡಿ ಸಿಲುಕಿದ ಭಾಸ್ಕರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಸ್ಥಳಿಯರು ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.