ಹ್ಯಾಂಡಲ್​ ಬೀಗ ಮುರಿದು ಸ್ಕೂಟರ್​ ಕಳವು

14 10 2025_BGR_RURAL_PAGE5
ಹೊಸಕೋಟೆಯ ರಾಯನ್​ಸಿಂಗ್​ಪೇಟೆ ರಸ್ತೆಯಲ್ಲಿ ಸ್ಕೂಟರ್​ ಕಳವು ಪ್ರಕರಣ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
Published on

ಹೊಸಕೋಟೆ : ನಗರದ ರಾಯನ್​ಸಿಂಗ್​ಪೇಟೆ 5ನೇ ಕ್ರಾಸ್​ನಲ್ಲಿ ಶನಿವಾರ ಮಧ್ಯರಾತ್ರಿ 2.45ರ ಸುಮಾರಿಗೆ ಸ್ಕೂಟರ್​ವೊಂದರಲ್ಲಿ ತ್ರಿಬ್ಬಲ್​ ರೈಡಿಂಗ್​ ಬಂದ ಕಳ್ಳರ ತಂಡ ಮನೆ ಮುಂದೆ ನಿಲುಗಡೆ ಮಾಡಿದ್ದ ಸ್ಕೂಟರ್​ನ ಹ್ಯಾಂಡಲ್​ಲಾಕ್​ ಮುರಿದು ಕ್ಷಣಾರ್ಧದಲ್ಲಿ ಕಳವು ಮಾಡಿದೆ. ಸ್ಥಳಿಯ ನಿವಾಸಿ ರಮೇಶ್​ ಎಂಬುವವರ ವಾಹನ ಕಳುವಾಗಿದ್ದು, ಪಕ್ಕದ ಮನೆಯವರ ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ದೃಶ್ಯ ಅಸ್ಪಷ್ಟ!: ರಾಯನ್​ಸಿಂಗ್​ಪೇಟೆ 5ನೇ ರಸ್ತೆಯಲ್ಲಿನ ಬೀದಿದೀಪದ ಕಂಬಗಳಲ್ಲಿ ವಿದ್ಯುತ್​ ದೀಪವಿಲ್ಲದ ಪರಿಣಾಮ ಕಳವು ದೃಶ್ಯ ಅಸ್ಪಷ್ಟವಾಗಿದೆ. ಕಳ್ಳರ ಮುಖಚಹರೆ ಹಾಗೂ ಕಳವು ಮಾಡಲು ಬಳಸಿದ್ದ ವಾಹನ ನೋಂದಣಿ ಸಂಖ್ಯೆ ಕಾಣುತ್ತಿಲ್ಲ. ಹಲವು ಬಾರಿ ನಗರಸಭೆಯವರಿಗೆ ಮನವಿ ಮಾಡಿದ್ದರೂ ಬೀದಿದೀಪಗಳ ದುರಸ್ತಿ ಮಾಡಿಸಿಲ್ಲ ಎಂದು ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿದೀಪಗಳಿದ್ದರೆ ಕಳವಿ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲದೆ ಕೃತ್ಯದ ದೃಶ್ಯ ಸ್ಪಷ್ಟವಾಗುವುದರಿಂದ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಲು ಸಹಕಾರಿಯುತ್ತದೆ, ಆದರೆ ಅಧಿಕಾರಿಗಳು ಈ ಬಗ್ಗೆ ರ್ನಿಲಕ್ಷ$್ಯ ಧೋರಣೆ ಅನುಸರಿಸುತ್ತಾರೆ ಎಂಬುದು ಸ್ಥಳಿಯರ ಆರೋಪವಾಗಿದೆ.

ನಮ್ಮ ಮನೆಯಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸ್ಕೂಟರ್​ ಕಳವಿನ ಪ್ರಕರಣದ ದೃಶ್ಯ ಸೆರೆಯಾಗಿದೆ, ಆದರೆ ಬೀದಿ ದೀಪವಿಲ್ಲದ ಕಾರಣ ದೃಶ್ಯ ಅಸ್ಪಷ್ಟವಾಗಿದೆ. ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಈ ಪ್ರಕರಣ ನಂತರ ಒಂದು ಕಂಬಕ್ಕೆ ದೀಪ ಹಾಕಿಸಿದ್ದಾರೆ ಇನ್ನೊಂದಕ್ಕೆ ಇನ್ನೂ ಹಾಕಿಲ್ಲ. ನಗರದಲ್ಲಿ ಹಲವು ಕಡೆ ಇದೇ ಸಮಸ್ಯೆ ಇದೆ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕು. | ನಾಗಭೂಷಣ್​ ರಾಯನ್​ಸಿಂಗ್​ಪೇಟೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net