ಸ್ಕೂಟರ್ ಸ್ಕಿಡ್, ಸವಾರನಿಗೆ ಗಾಯ

Bike Accident_2
Published on

ಸುಳ್ಯ: ನಾಯಿ ಅಡ್ಡಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಬಿದ್ದು, ಸವಾರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಕಡಪಾಲದಲ್ಲಿ ಶುಕ್ರವಾರ ಸಂಭವಿಸಿದೆ. ಚೆಂಬು ಗ್ರಾಮದ ಯುವಕ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ, ಕಡೆಪಾಲ ಎಂಬಲ್ಲಿ ನಾಯಿ ಅಡ್ಡಬಂದ ಪರಿಣಾಮ ಸ್ಕಿಡ್ ಆಗಿ ಪಲ್ಟಿಯಾಗಿದೆ. ಯುವಕನ ತಲೆ ಹಾಗೂ ಕೈ -ಕಾಲುಗಳಿಗೆ ಗಾಯವಾಗಿದ್ದು, ಸ್ಥಳೀಯರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net