ಅಪಘಾತದಲ್ಲಿ ಸ್ಕೂಟರ್ ಸವಾರ ಸಾವು

Bike Accident
Published on

ಕೊಳ್ಳೇಗಾಲ: ತಾಲೂಕಿನ ಟಗರಪುರ ಗ್ರಾಮದ ಬಳಿ ಗುರುವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿದ್ದಾನೆ.

ಟಗರಪುರ ಗ್ರಾಮದ ನಿವಾಸಿ ರೇಚಣ್ಣ(30) ಮೃತಪಟ್ಟವರು.

ಕೊಳ್ಳೇಗಾಲದಿಂದ ಟಗರಪುರ ಗ್ರಾಮಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ರೇಚಣ್ಣ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಅಗರ-ಮಾಂಬಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಕರಿಬಸಪ್ಪ ಪ್ರತಿಕ್ರಿಯಿಸಿ, ಲಾರಿ ಡಿಕ್ಕಿ ಹೊಡೆದು ಹೋಗಿರುವ ಮಾಹಿತಿ ಇದ್ದು ಪತ್ತೆಗೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಎಎಸ್‌ಐ ಮಲ್ಲಿಕಾರ್ಜುನ್, ಕಾನ್‌ಸ್ಟೆಬಲ್ ಪರಶಿವಮೂರ್ತಿ, ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net