

ಬೈಲುಕುಪ್ಪೆ: ಕೊಪ್ಪ ಬಿ.ಎಂ.ರಸ್ತೆಯಲ್ಲಿ ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಗುರುವಾರ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಡಿಕೇರಿ ತಾಲೂಕು ಕಡಗನಹಳ್ಳಿ ಗ್ರಾಮದ ನಿವಾಸಿ ತಂಗರಾಜನ ಪುತ್ರ ಶಾಮಿಯಲ್ (22) ಮೃತರು. ಹಿಂಬದಿ ಸವಾರ ಅದೇ ಗ್ರಾಮದ ನಿವಾಸಿ ತಂಗಮಣಿ ಪುತ್ರ ನವೀನ್(26) ಗಂಭೀರವಾಗಿ ಗಾಯಗೊಂಡಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಬಿ.ಎಂ.ರಸ್ತೆಯಲ್ಲಿ ಕುಶಾಲನಗರ ಕಡೆಯಿಂದ ಬಂದ ಟಿಪ್ಪರ್ ಪಿರಿಯಾಪಟ್ಟಣದ ಕಡೆಯಿಂದ ಕುಶಾಲನಗರ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಾಮಿಯಲ್ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತನ ತಂದೆ ತಂಗರಾಜ ದೂರಿನ ಮೇರೆಗೆ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.