ನವಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ದ್ವಾರದ ವೇ ಬ್ರಿಡ್ಜ್ ಬಳಿ ಲಾರಿ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತ್ಯು

accident-15
Published on

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ದ್ವಾರದ ವೇ ಬ್ರಿಡ್ಜ್ ಬಳಿ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‌ಗೆ ಸವಾರ ರಕ್ಷಿತ್ ರೈ(34) ಎಂಬವರು ಮೃತಪಟ್ಟಿದ್ದಾರೆ.

ಭರತ್ ಕುಮಾರ್ ಎಂಬವರ ಜತೆ ಕೆಲಸ ಮಾಡುವ ರಕ್ಷಿತ್ ರೈ ಅವರು ಸೋಮವಾರ ಸಂಜೆ ಎನ್‌ಎಂಪಿಎ ಒಳಗೆ ಕೆಲಸ ಮುಗಿಸಿ ಸ್ನೇಹಿತ ಶರತ್ ಎಂಬವರ ಸ್ಕೂಟರ್‌ನಲ್ಲಿ ಹೊರಗಡೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಬರ್ತ್ ಕಡೆಯಿಂದ ವೇ ಬ್ರಿಡ್ಜ್ ಕಡೆಗೆ ರಘು ಎಂಬಾತ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ರಕ್ಷಿತ್ ಸ್ಕೂಟರ್ ಸಮೇತ ಕಾಂಕ್ರೀಟು ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭ ಲಾರಿಯ ಹಿಂಬದಿ ಎಡ ಚಕ್ರ ರಕ್ಷಿತ್ ಅವರ ಮೇಲೆ ಹರಿದಿದೆ. ಅವರ ಬಲ ಭಾಗದ ಸೊಂಟ, ತೊಡೆ, ಕಿಬ್ಬೊಟ್ಟೆ ಭಾಗಕ್ಕೆ ಮತ್ತು ಬಲ ಕೈಗೆ ಗಂಭೀರ ಸ್ವರೂಪದ ಗಾಯವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ನಗರದ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದು, ಈ ಸಂದರ್ಭ ಅವರು ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net