ಪಿಕ್‌ಅಪ್‌ಗೆ ಸ್ಕೂಟರ್ ಡಿಕ್ಕಿ, ಸವಾರ ಗಾಯ

Oplus_2
Published on

ಸೋಮವಾರಪೇಟೆ: ಇಲ್ಲಿನ ಅಲೇಕಟ್ಟೆ ರಸ್ತೆಯಲ್ಲಿ ಪಿಕ್‌ಅಪ್ ವಾಹನಕ್ಕೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ, ಸ್ಕೂಟರ್ ನಜ್ಜುಗುಜ್ಜಾಗಿದ್ದು, ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಡಬ ಸತ್ತಾರ್ ಅವರು ಪಿಕ್‌ಅಪ್ ವಾಹನವನ್ನು ಬಲಭಾಗಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಹಾನಗಲ್ಲು ಬಾಣೆ ಗ್ರಾಮದ ದಿವಾಕರ ಎಂಬಾತ ಡಿಕ್ಕಿ ಹೊಡೆದಿದ್ದಾರೆ. ದ್ವಿಚಕ್ರ ವಾಹನ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net