ಕಂಬಳಬೆಟ್ಟುವಿನಲ್ಲಿ ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ ಹೊಡೆದು ಇಬ್ಬರಿಗೆ ಗಾಯ

IMG-20220428-WA0009
Published on

ವಿಟ್ಲ: ಇಲ್ಲಿನ ವಿಟ್ಲ-ಕಬಕ ರಸ್ತೆಯ ಕಂಬಳಬೆಟ್ಟುವಿನಲ್ಲಿ ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ.
ಕನ್ಯಾನ ನಿವಾಸಿಗಳಾದ ಮಹಮ್ಮದ್ ಯಾಸಿನ್ (21) ಗಂಭೀರ ಗಾಯಗೊಂಡಿದ್ದು, ಅಬ್ದುಲ್ ರಹಿಮಾನ್ ಗಾಯಗೊಂಡಿದ್ದಾರೆ. ವಿಟ್ಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಬಕ ಕಡೆಗೆ ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ. ಅಪಘಾತ ಮಾಡಿದ ರಿಕ್ಷಾ ಪಲಾಯನಕ್ಕೆ ಯತ್ನಿಸಿದ್ದು, ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದ ಚಾಲಕನ ಬಲಭಾಗದಲ್ಲಿ ಸೀಟಿನ ಭಾಗ, ದ್ವಿಚಕ್ರ ವಾಹನದ ಮುಂಭಾಗ ಜಖಂಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net