ವೈಜ್ಞಾನಿಕವಾಗಿ ರಸಗೊಬ್ಬರ ಬಳಸಲಿ

18MUDALGI1
Published on

ಮೂಡಲಗಿ: ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಂದ ಭೂಮಿ ಲವತ್ತತೆ ನಾಶವಾಗುವುದರಿಂದ ಉತ್ತಮ ಇಳುವರಿ ಪಡೆಯಲು ಆಗುವುದಿಲ್ಲ. ರೈತರು ವೈಜ್ಞಾನಿಕ ಪದ್ಧತಿ ಅನುಸಾರ ರಸಗೊಬ್ಬರ ಬಳಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅತಿಯಾದ ರಸಗೊಬ್ಬರ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಟರಿಣಾಮ ಹಾಗೂ ಕಷಿಹೊಂಡಗಳ ಸುತ್ತ ತಂತಿ ಬೇಲಿ ಅಳವಡಿಕೆ ಕುರಿತು ಸೋಮವಾರ ಪಟ್ಟಣದಲ್ಲಿ ಜಾಗತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಗೋಕಾಕ ಮತ್ತು ಮೂಡಲಗಿ ತಾಲೂಕಿನ ಸಹಾಯಕ ಕಷಿ ನಿರ್ದೇಶಕ ಎಂ.ಎಂ. ನದ್​ಾ ಮಾತನಾಡಿ, ಬೆಳೆಗಳಿಗೆ ಸೆಣಬು, ತಿಪ್ಪೆಗೊಬ್ಬರ ಬಳಸುವುದು ಆರೋಗ್ಯ ದಷ್ಟಿಯಿಂದ ಉತ್ತಮ ಎಂದು ಸಲಹೆ ನೀಡಿದರು. ತಹಸೀಲ್ದಾರ್​ ಶ್ರೀಶೆಲ ಗುಡಮೆ, ಹೆಸ್ಕಾಂ ಎಇಇ ಎಂ.ಎಸ್​. ನಾಗನ್ನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಅಧಿಕಾರಿಗಳಾದ ಪರಸಪ್ಪ ಹುಲಗಬಾಳ, ಸುರೇಶ ಬಿರಾಣಿ, ಪುರಸಭೆ ಅದ್ಯರು, ಉಪಾಧ್ಯರು, ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net