ವೈಜ್ಞಾನಿಕ ಬರವಣಿಗೆ ಕಾರ್ಯಾಗಾರ

Published on

ಹುಬ್ಬಳ್ಳಿ: ಇಲ್ಲಿಯ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಜುಲೈ 1ರಿಂದ ಮೂರು ದಿನಗಳವರೆಗೆ ವೈಜ್ಞಾನಿಕ ಬರವಣಿಗೆ ಸಂಶೋಧನಾ ಸಮಗ್ರತೆ ಮತ್ತು ಪ್ರಕಟಣೆಯ ನೀತಿ ಶಾಸ್ತ್ರದ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ.

ಇಲ್ಲಿಯ ಗೋಕುಲ ರಸ್ತೆ ರಾಜೇಂದ್ರ ನಗರ ರಾಜೇಶ್ವರ ಭವನದ ಅಂಜನಾ (ಪಟೇಲ) ಸಮಾಜ ಸೇವಾ ಸಂಟನೆಯ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಾರತೀಯ ಔಷಧ ಪದ್ದತಿಯ ರಾಷ್ಟ್ರೀಯ ಆಯೋಗದ ಸಹಯೋಗದೊಂದಿಗೆ ಕಾರ್ಯಾಗಾರ ನಡೆಯಲಿದ್ದು, 10ಕ್ಕೂ ಹೆಚ್ಚು ನುರಿತ ಪರಿಣಿತ ತರಬೇತುದಾರರಿಂದ ಮಾರ್ಗದರ್ಶನ ನಡೆಯಲಿದೆ.

ಜುಲೈ 1ರಂದು ಬೆಳಗ್ಗೆ 10ಕ್ಕೆ ನರರೋಗ ತಜ್ಞ ಡಾ. ಕ್ರಾಂತಿಕಿರಣ ಕಾರ್ಯಕ್ರಮ ಉದ್ಘಾಟಿಸುವರು. ಭಾರತೀಯ ಔಷಧ ಪದ್ದತಿಯ ರಾಷ್ಟ್ರೀಯ ಆಯೋಗದ ಅಧ್ಯ ಡಾ. ಬಿ.ಎಸ್. ಪ್ರಸಾದ ಅತಿಥಿಯಾಗಿ ಪಾಲ್ಗೊಳ್ಳುವರು.

ಜು. 3ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಆಯುರ್ವೇದ ಕಾಲೇಜಿನ ಚೇರ್ಮನ್ ಗೋವಿಂದ ಜೋಶಿ, ಡಾ. ಪಿ.ವಿ. ಕಂಚಿ, ಸೋಮಶೇಖರಯ್ಯಾ, ಡಾ. ಜೆ.ಆರ್. ಜೋಶಿ ಇತರರು ಅತಿಥಿಯಾಗಿ ಭಾಗವಹಿಸುವರು ಎಂದು ಪ್ರಾಂಶುಪಾಲ ಡಾ. ಪ್ರಶಾಂತ್ ಎ.ಎಸ್, ಸಂಟನಾ ಕಾರ್ಯದರ್ಶಿ ಡಾ. ಶಿವಾಜಿ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net