

ಅಳವಂಡಿ: ಕೃಷಿಯ ಸುಸ್ಥಿರತೆಗಾಗಿ ಹೊಸ ಅಭಿವೃದ್ಧಿ ಮೂಲಕ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸುವುದೇ ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಯೋಜನೆಯ ಗುರಿ ಎಂದು ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ತಿಳಿಸಿದರು.
ಸಮೀಪದ ಹಟ್ಟಿ ಗ್ರಾಮದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ, ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಜಲಾನಯನ ಅಭಿವೃದ್ದಿ ಯೋಜನೆ.
ಕ್ಷೇತ್ರಮಟ್ಟದ ಸರ್ಕಾರೇತರ ಸಂಸ್ಥೆ ಸ್ವೋರ್ಡ-ಕೆ-ಸಾಶ್ವಿಹಳ್ಳಿ, ಬೆಂಗಳೂರಿನ ಟೆರ‌್ರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಜಲಾನಯನ ಅಭಿವೃದ್ದಿ ಕಾರ್ಯಕಾರಿಣಿ ಸಮಿತಿಯ ಗ್ರಾಮಸಭೆಯಲ್ಲಿ ಸೋಮವಾರ ಮಾತನಾಡಿದರು.
ರೈತರ, ಸರ್ಕಾರಿ ಜಮೀನು ಮತ್ತು ಪ್ರದೇಶಗಳಲ್ಲಿ ನೀರು ಹರಿಯುವ ಹಳ್ಳ-ಕೊಳ್ಳಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆ ಕೈಕೊಳ್ಳಲಾಗುವದು.
ತೋಟಗಾರಿಕೆ, ಕೃಷಿ ಅರಣ್ಯ ಬೆಳೆ ಪದ್ದತಿ ಮುಖಾಂತರ ರೈತರ ಆದಾಯ ಮೂಲ ಹೆಚ್ಚಿಸುವುದು ಮತ್ತು ಹಸಿರು ಹೊದಿಕೆ ಹೆಚ್ಚಿಸಿ ರೈತರ ಆದಾಯ ದ್ವಿಗುಣಗೊಳಿಸಲಾಗುವದು.
ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ, ಮೌಲ್ಯ ಸರಪಳಿ ಅಭಿವೃದ್ದಿಯೊಂದಿಗೆ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವದು.
ಯೋಜನಾ ವ್ಯಾಪ್ತಿಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಕೌಶಲ್ಯ ತರಬೇತಿ, ಸಣ್ಣ ಪ್ರಮಾಣದ ಸ್ವ ಉದ್ಯೋಗಕ್ಕೆ ಅನುಕೂಲ ಮಾಡಿ ಕೊಡುವ ಉದ್ದೇಶ ಇದೆ ಎಂದರು.
ಗ್ರಾಪಂ ಅಧ್ಯಕ್ಷೆ ಪರವಿನಬಾನು, ಉಪಾಧ್ಯಕ್ಷ ನಿಂಗನಗೌಡ, ಪಿಡಿಓ ರತ್ನವ್ವ, ಕಾರ್ಯದರ್ಶಿ ಮಂಜುನಾಥಯ್ಯ, ಕೃಷಿ ಅಧಿಕಾರಿ ಬಿ.ಎಮ್.ಗೊಬ್ಬರಗುಂಪಿ, ಎಎಓ ವೀರೇಶ ಪಟ್ಟೇದ, ಮಾರುತಿ.
ಟೆರ‌್ರಿ ಸಂಸ್ಥೆಯ ಮೌಲ್ಯಮಾಪನ ಅಧಿಕಾರಿ ಮೀರಾ ಬೀರಣ್ಣವರ, ಸ್ವೋರ್ಡ-ಕೆ ಸಂಸ್ಥೆಯ ಡಿಪಿಸಿ ಪ್ರಶಾಂತ, ಕಾರ್ಯದರ್ಶಿ ಚನ್ನಬಸಪ್ಪ, ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಜಲಾನಯನ ತಂಡದ ಗವಿಸಿದ್ದಪ್ಪ, ವೆಂಕಟೇಶ ಹಳೆಮನಿ, ಬಸನಗೌಡ ಪಾಟೀಲ, ಸಂತೋಷ, ಗವಿಸಿದ್ದಪ್ಪ ಬಾರಕೇರ ಇದ್ದರು.