ವೈಜ್ಞಾನಿಕ ಕ್ರಮದಲ್ಲಿ ದಂತ ಸ್ವಚ್ಛಗೊಳಿಸಿಕೊಳ್ಳಿ

DENTAL
ಕಂಪ್ಲಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಜೆಸಿಐ ಕಂಪ್ಲಿ ಸೋನಾ ಹಮ್ಮಿಕೊಂಡ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ರಾಮಾಂಜನೇಯಲು ಭಟ್ ಮಾತನಾಡಿದರು. ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ಯೋಗ ಉಪನ್ಯಾಸಕ ಡಿ.ಮಹೇಶಬಾಬು, ದಂತ ಆಸ್ಪತ್ರೆ ಸಿಬ್ಬಂದಿ ಅನು, ಸುನಿತಾ ಇದ್ದಾರೆ.
Published on

ಕಂಪ್ಲಿ: ಬಾಲ್ಯದಲ್ಲಿಯೇ ಹಲ್ಲಿನ ಸಂರಕ್ಷಣೆ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಇಲ್ಲಿನ ದಂತ ವೈದ್ಯ ಡಾ.ರಾಮಾಂಜನೇಯಲು ಭಟ್ ಹೇಳಿದರು.

ಇಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಭಾನುವಾರ ಜೆಸಿ ಜೆಸಿಐ ಕಂಪ್ಲಿ ಸೋನ ಹಮ್ಮಿಕೊಂಡಿದ್ದ ದಂತ ತಪಾಸಣೆ ಶಿಬಿರ ಹಾಗೂ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಜಾಗೃತಿ

ಹಲ್ಲಿನ ರಕ್ಷಣೆ ಉಪೇಕ್ಷಿಸಿದರೆ ಭವಿಷ್ಯದಲ್ಲಿ ದಂತ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿತ್ಯ ಬೆಳಗ್ಗೆ-ರಾತ್ರಿ ವೈಜ್ಞಾನಿಕ ಕ್ರಮದಲ್ಲಿ ದಂತ ಸ್ವಚ್ಛತೆಗೊಳಿಸುವ ಕೌಶಲ ಅರಿತು ಅಳವಡಿಸಿಕೊಳ್ಳಬೇಕು. ದಂತ ಕ್ಷಯಕ್ಕೆ ಕಾರಣ ಅರಿತು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದರು.

ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ ಕೊಟ್ರಪ್ಪ ಸೋಗಿ ಅಧ್ಯಕ್ಷತೆವಹಿಸಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಿಸಲು ವೈಯಕ್ತಿಕ ಆರೋಗ್ಯದ ಕಡೆ ನಿಗಾವಹಿಸಬೇಕು. ದೇಹದ ಅಂಗಾಂಗಳ ಆರೋಗ್ಯಕ್ಕೆ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಯ ಯೋಗ ಉಪನ್ಯಾಸಕ ಡಿ.ಮಹೇಶಬಾಬು ನಿಲಯದ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ನಿಲಯ ಮೇಲ್ವಿಚಾರಕ ಕೆ.ವಿರೂಪಾಕ್ಷಪ್ಪ, ಜೆಸಿಐ ಮಹಿಳಾ ಅಧ್ಯಕ್ಷೆ ಅಮೃತಾ ಸಂತೋಷ, ಪದಾಧಿಕಾರಿಗಳಾದ ಇಂದ್ರಜಿತ್‌ಸಿಂಗ್, ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ, ದಂತ ಆಸ್ಪತ್ರೆಯ ಸಿಬ್ಬಂದಿ ಅನು, ಸುನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net