

ಲಿಂಗಸುಗೂರು: ನಾಡಿನ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮೌಢ್ಯಾಚರಣೆಗಳಿಂದ ಮುಕ್ತರಾಗಿ ಬದುಕು ಸಾಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ನ.29 ಮತ್ತು 30 ರಂದು ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಗುರುಭವನದಲ್ಲಿ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದ್ದು, ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಜನರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಜಾಗೃತಿ ಮೂಡಿಸುವುದು, ಮೌಢ್ಯ ದೂರ ಮಾಡುವುದು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಶಿಕ್ಷಣ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಯೋಜನೆಗಳೊಂದಿಗೆ ವಿಜ್ಞಾನ ಗ್ರಾಮ ನಿರ್ಮಾಣ ಮಾಡುವ ಕನಸು ಹೊತ್ತ ಸಮ್ಮೇಳನ ಇದಾಗಿದೆ. ಇದೇ ವೇಳೆ ‘ಕಲ್ಯಾಣ ಸಿರಿ’ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದರು.
ಇದನ್ನೂ ಓದಿ: ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಭಾರತ
ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಪ್ರಮುಖರಾದ ಭೀಮಣ್ಣ ನಾಯಕ, ಪ್ರಭುಲಿಂಗ ಗದ್ದಿ, ಗೋವಿಂದ ನಾಯಕ, ಜಿಲಾನಿ ಪಾಷಾ, ಚಿಕ್ಕ ಹನುಮಂತೇಗೌಡ, ಕೆವಿಟಿ ಸ್ವಾಮಿ, ಚಿರಂಜೀವಿ ರೋಡಕರ್, ಮಾದೇಶ ಸರ್ಜಾಪುರ, ಮೋಹನ್ ಗೋಸ್ಲೆ ಇತರರು ಇದ್ದರು.