

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ಅಂಗನವಾಡಿ ಕೇಂದ್ರವೊಂದರ ಬಳಿ ಸಿಕ್ಕಿದ್ದ ಕೆರೆ ಹಾವಿನ 67 ಮೊಟ್ಟೆಗಳನ್ನು ರಕ್ಷಣೆ ಮಾಡಿ ಅವುಗಳನ್ನು ಮನೆಗೆ ತಂದು ವೈಜ್ಞಾನಿಕವಾಗಿ ಕೃತಕ ಕಾವು ಕೊಟ್ಟು ಮರಿಗಳನ್ನು ಹೊರ ತೆಗೆದು ಗುರುವಾರ ಅರಣ್ಯಕ್ಕೆ ಬಿಡಲಾಯಿತು.
ತಾಲೂಕಿನ ಪಾಳಾ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ ಹೊನ್ನಾವರ ಹಾಗೂ ಅರಣ್ಯ ರಕ್ಷಕ ಮುತ್ತುರಾಜ ಹಳ್ಳಿ ಎಂಬುವವರು ನಿರಂತರವಾಗಿ ಹಾವುಗಳ ರಕ್ಷಣೆ ಮಾಡುತ್ತ್ತ ಬಂದಿದ್ದಾರೆ. ಇದೀಗ ಅರಣ್ಯ ರಕ್ಷಕ ಮುತ್ತುರಾಜ ಹಳ್ಳಿ ಅವರಿಗೆ ಪಾಳಾ ಗ್ರಾಮದ ಅಂಗನವಾಡಿ ಕೇಂದದ ಬಳಿ ಜುಲೈ 22ರಂದು ಸಿಕ್ಕಿದ್ದ ಕೆರೆ ಹಾವಿನ 67 ಮೊಟ್ಟೆಗಳನ್ನು ರಕ್ಷಣೆ ಮಾಡಿ ಮನೆಗೆ ತಂದು ಅವುಗಳಿಗೆ ಕೃತಕವಾಗಿ ಕಾವು ಕೊಟ್ಟು ಮರಿಗಳನ್ನು ಹೊರ ತೆಗೆದಿದ್ದಾರೆ.
ಗುರುವಾರ ಕಾತೂರ ವಲಯ ಅರಣ್ಯಾಧಿಕಾರಿ ವೀರೇಶ ನೇತೃತ್ವದಲ್ಲಿ ಮರಿಗಳನ್ನು ಅರಣ್ಯ ಬಿಡಲಾಯಿತು. ಅರಣ್ಯರಕ್ಷಕನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.