ಮಕ್ಕಳ ಬೌದ್ಧಿಕ ಬೆಳವಣಿಗೆ ಹೆಚ್ಚಿಸಲಿರುವ ವಿಜ್ಞಾನ

IMG-20240210-WA0020
ಬಾಳುಗೋಡು ಏಕಲವ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ.
Published on

ವಿರಾಜಪೇಟೆ: ಪ್ರಸ್ತುತ ವಿಜ್ಞಾನ ಮಹತ್ವದ ವಸ್ತು ವಿಷಯವಾಗಿದ್ದು, ವಿಜ್ಞಾನ ಮಕ್ಕಳಿಗೆ ಜ್ಞಾನ ಒದಗಿಸುದರ ಜತೆಗೆ ಅವರ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಇಲ್ಲಿನ ಸಂತ ಅನ್ನಮ್ಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಬೆನ್ನಿ ಜೋಸೆಫ್ ಹೇಳಿದರು.

ಸಮೀಪದ ಬಾಳುಗೋಡು ಏಕಲವ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ಮುಂದುವರಿಯಬೇಕಾದರೆ ವಿಜ್ಞಾನ ಬೆಳವಣಿಗೆಯಿಂದ ಮಾತ್ರ ಸಾಧ್ಯ. ಅಲ್ಲದೆ ಇಂತಹ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಮಕ್ಕಳಲ್ಲಿ ಹೊಸ ಆವಿಷ್ಕಾರ, ಆಲೋಚನೆ ಮೂಡಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ದಿಲನ್ ಮಾತನಾಡಿ, ವಿಜ್ಞಾನದ ಬಳಕೆ ಹೆಚ್ಚಿದಂತೆ ರಾಷ್ಟ್ರದ ತಂತ್ರಜ್ಞಾನ ಪ್ರಗತಿ ಹೊಂದಲಿದೆ. ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಗೆ ಪೂರಕವಾಗಲಿದೆ ಎಂದರು.

ಹಾಲಿನಲ್ಲಿರುವ ಕೆಸಿನ್ ಪ್ರಮಾಣ ಕಂಡು ಹಿಡಿಯುವ ಮಾದರಿ, ಭೂಕಂಪನ ಎಚ್ಚರಿಕೆ ಗಂಟೆ ಮಾದರಿ, ಕೊಳಚೆ ನೀರಿನ ಸಂಸ್ಕರಣೆ, ವಾಲ್ಕೆನೋ ಮಾದರಿ, ಸಾವಯವ ಕೃಷಿ ಮುಂತಾದ ಮಾದರಿಗಳನ್ನು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮಾತ್ರವಲ್ಲದೆ ವಿಜ್ಞಾನ ರಸಪ್ರಶ್ನೆ, ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಜ್ಞಾಪಕ ಪರೀಕ್ಷೆ, ಪ್ರಬಂಧ ರಚನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಆಯೋಜಕರಾದ ರೇಷ್ಮಾ, ಸಚಿನ್, ಭರತ್ ಕುಮಾರ್, ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net