

ಮುದ್ದೇಬಿಹಾಳ: ನಾವೀಗ ಕ್ವಾಂಟಮ್ ವಿಜ್ಞಾನ, ತಂತ್ರಜ್ಞಾನದ ಅಂತಾರಾಷ್ಟ್ರೀಯ ವರ್ಷಾಚರಣೆಯಲ್ಲಿದ್ದೇವೆ. ಇತ್ತೀದಿನ ದಿನಗಳಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್, ಅಪ್ಲಿಕೇಶನ್, ತಂತ್ರಜ್ಞಾನದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಿವೆ. ಅವುಗಳನ್ನು ಸಂಶೋಧಕರು, ಪಂಡಿತರು ಅರಿತು ಜನರಿಗೆ ತಿಳಿಸಬೇಕು ಎಂದು ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಡೀನ್ ಪ್ರೊ.ಎಸ್.ಎಂ.ಶಿವಪ್ರಸಾದ ಹೇಳಿದರು.
ಇಲ್ಲಿನ ಎಸ್‌ಜಿವಿಸಿ ಟ್ರಸ್ಟ್‌ನ ಎಂಜಿವಿಸಿ ಪದವಿ ಕಾಲೇಜಿನಲ್ಲಿ ಭೌತಶಾಸ, ರಸಾಯನಶಾಸ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಬೆಳವಣಿಗೆ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕ್ವಾಂಟಮ್ ೆಟೋನಿಕ್ಸ್ ವೈದ್ಯಕೀಯ ಚಿತ್ರಣ, ರೋಗನಿರ್ಣಯ ಮುಂದುವರಿಸುತ್ತದೆ. ಕ್ವಾಂಟಮ್ ರಸಾಯನಶಾಸವು ಹೊಸ ಲಸಿಕೆಗಳು, ಔಷಧಗಳ ಅಭಿವೃದ್ಧಿ ಬೆಂಬಲಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಜಿವಿಸಿ ಟ್ರಸ್ಟ್‌ನ ಅಧ್ಯಕ್ಷ ಡಾ.ಸತೀಶ ಜಿಗಜಿನ್ನಿ ಮಾತನಾಡಿ, ವಿಚಾರ ಸಂಕಿರಣವು ವಿದ್ಯಾರ್ಥಿಗಳು, ಸಂಶೋಧಕರಿಗೆ ಹೆಚ್ಚು ಉಪಯುಕ್ತವಾಗಿದೆ. ಸಂಪನ್ಮೂಲ ವ್ಯಕ್ತಿಗಳು ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನ, ತಂತ್ರಜ್ಞಾನ ಬಳಸುವ ರೀತಿ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿ ಹಲವು ವಿಚಾರಗಳನ್ನು ಪರಿಚಯಿಸಿರುವುದು ಶ್ಲಾಘನೀಯ ಎಂದರು.
ರಾಯಚೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ರಾಘವೇಂದ್ರ ಪತ್ತೇಪುರ ಅವರು ಕ್ವಾಂಟಮ್ ಕಂಪ್ಯೂಟರ್ಸ್, ಬಾಗಲಕೋಟೆ ಜಿಲ್ಲೆಯ ಇಳಕಲ್ಲದ ಎಸ್‌ವಿಎಂ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ.ಎಸ್.ಕಂದಗಲ್ ಅವರು ಕ್ವಾಂಟಮ್ ಪ್ಯಾರಲಾಲೀಸಂ ಕುರಿತು ಗೋಷ್ಠಿ ನಡೆಸಿಕೊಟ್ಟರು. ರಸಾಯನಶಾಸ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಎಸ್.ಕಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ಜಿವಿಸಿ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ, ಆಡಳಿತಾಧಿಕಾರಿ ಪ್ರೊ.ಎ.ಬಿ.ಕುಲಕರ್ಣಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಎಂ.ಐ.ಬಿರಾದಾರ, ಉಪನ್ಯಾಸಕರು, ಪ್ರಬಂಧ ಮಂಡನೆಕಾರರು, ಪದವಿ ವಿದ್ಯಾರ್ಥಿಗಳು ಇತರರಿದ್ದರು.
ಲಕ್ಷ್ಮೀ ಬಿ. ಸ್ವಾಗತಿಸಿದರು. ಅನ್ನಪೂರ್ಣ ಕಟ್ಟಿ, ಡಾ.ಪ್ರಕಾಶ ನರಗುಂದ ನಿರೂಪಿಸಿದರು. ಡಾ.ಎಂ.ಐ.ಬಿರಾದಾರ ವಂದಿಸಿದರು.