ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ ವಿಜ್ಞಾನ ಮಾದರಿಗಳು

Edu-Expo-2024-1
ವಿಜಯಪುರ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲು ಆಗಮಿಸಿದ ಸಚಿವ ಎಂ.ಬಿ. ಪಾಟೀಲ ಅವರಿಗೆ ಸಸಿ ನೀಡಿ ಸ್ವಾಗತಿಸಲಾಯಿತು. ಇಸ್ರೋ ಹಿರಿಯ ವಿಜ್ಞಾನಿ ವಿಲಾಸ ರಾಠೋಡ, ವಿಜಯಪುರ ಎಕ್ಸ್ಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ, ವೇದ ಅಕಾಡೆಮಿ ಅಧ್ಯಕ್ಷ- ಖ್ಯಾತ ಶಿಕ್ಷಣ ತಜ್ಞ ಶಿವಾನಂದ ಕೆಲೂರ ಇತರರಿದ್ದರು.
Published on

ವಿಜಯಪುರ: ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಎಜುಕೇಷನ್ ಎಕ್ಸ್ಪೋದಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿ ಸ್ವತಃ ಎಲ್ಲ ಮಾದರಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಸ್ರೋ ಹಿರಿಯ ವಿಜ್ಞಾನಿ ವಿಲಾಸ ರಾಠೋಡ, ವಿಜಯಪುರ ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ, ವೇದ ಅಕಾಡೆಮಿ ಅಧ್ಯಕ್ಷ- ಖ್ಯಾತ ಶಿಕ್ಷಣ ತಜ್ಞ ಶಿವಾನಂದ ಕೆಲೂರ ಇತರರಿದ್ದರು.

ವಸ್ತು ಪ್ರದರ್ಶನದಲ್ಲಿ ಬೆಂಕಿ ಸ್ವಯಂ ಚಾಲಿತ ನಂದಕ, ಗಣಿತ ಸೂತ್ರಗಳು, ಪೈಥಾಗೋರಸ್ ಪ್ರಮೇಯ, ಸಂಖ್ಯೆಗಳನ್ನು ಜೋಡಿಸುವ ಪದ್ಧತಿ, ಅಬ್ಯಾಕಸ್, ವಾಹಕ- ಅವಾಹಕಗಳು, ಶಾಖ ಪ್ರಸರಣ, ಬೆಳಗಿನ ನೇರ ಪ್ರಸರಣ- ಪಾರ್ಶ್ವ ಪಲ್ಲಟ, ಒಂದು ವರ್ಷ ಹನ್ನೊಂದು ಪ್ರತಿಬಿಂಬ, ಗುರುತ್ವ ಕೇಂದ್ರ ಮುಂತಾದ ಮಾದರಿಗಳ ಕುರಿತು ವಿದ್ಯಾರ್ಥಿಗಳು ವೀಕ್ಷಕರಿಗೆ ತುಂಬಾ ಆಸಕ್ತಿಯಿಂದ ವಿವರಣೆ ಮಾಡಿದ್ದು ಎಜುಕೇಷನ್ ಎಕ್ಸ್ಪೋಗೆ ಕಳೆ ತಂದಿತು.

ಆಕ್ಸಿಡೆಂಟ್ ಪ್ರಿವೆನ್‌ಷನ್ ಇನ್ ಹೇರ್ ಬೆಂಡ್ ಕರ್ವ್ ಮಾದರಿ, ತಳವಿಲ್ಲದ ಬಾವಿ, ವೇಗ- ವೇಗೋತ್ಕರ್ಷ, ಗಾಳಿ ಚಕ್ರ, ಸೌರವಿದ್ಯುತ್ ಕೋಶ ಮಾದರಿಗಳು ನೋಡುಗರ ಗಮನ ಸೆಳೆದವು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ 5 ಶಾಲೆಗಳ ವಿದ್ಯಾರ್ಥಿಗಳು ಮಾದರಿಗಳನ್ನು ರಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net