ಹುಬ್ಬಳ್ಳಿ: ಪದ್ಮಶ್ರೀ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪಿಠದ ಬಾಲಕಿಯರ ಸಂಯಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಹಾಗೂ ನೂತನ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಆ. 5ರಂದು ಬೆಳಗ್ಗೆ 9.30ಕ್ಕೆ ಆವರಣದ ಮಹಾತ್ಮ ಗಾಂಧಿ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಲಾಗಿದೆ.
ಶಾಸಕ ಪ್ರಸಾದ ಅಬ್ಬಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಹಿಳಾ ವಿದ್ಯಾಪಿಠದ ಅಧ್ಯಕ್ಷ ಬಸಂತಕುಮಾರ ಪಾಟೀಲ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಕೀರ್ತಿ ತಂಬದ, ಕೆ.ಟಿ. ಪಾಟೀಲ, ಜ್ಯೋತಿ ಜಂಗಣ್ಣವರ, ಎಸ್.ಜಿ. ಗದಗ ಉಪಸ್ಥಿತರಿರುವರು ಎಂದು ಪ್ರಾಚಾರ್ಯ ಮಂಜುಳಾ ಮುಂಡರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.