ವಿಜ್ಞಾನ ಜೀವನದ ಅವಿಭಾಜ್ಯ ಅಂಗ

30KHANAPUR1
Published on

ಖಾನಾಪುರ: ಕೆಎಲ್​ಇ ಸೊಸೆಟಿಯ ಖಾನಾಪುರ ಎಂಎಸ್​ ಹೊಸಮನಿ ಪಿಯು ಕಾಲೇಜಿನಲ್ಲಿ ಈಚೆಗೆ ಅಂತರಶಾಲಾ ವಿಜ್ಞಾನ ಪ್ರದರ್ಶನ ಆಯೋಜಿಸಲಾಯಿತು.

ಅಂಗಡಿ ಇನ್​ಸ್ಟಿಟ್ಯೂಟ್​ ಆ್​ ಟೆಕ್ನಾಲಜಿಯ ಸಹಪ್ರಾಧ್ಯಾಪಕ ಬಿ.ಸಿ. ಹೊಳ್ಳುರ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ದೆನಂದಿನ ಜೀವನದ ಅವಿಭಾಜ್ಯ ಅಂಗ ಎಂದರು. ಎಲ್​ಜಿಬಿ ಚೇರ್ಮನ್​ ಆರ್​.ಡಿ. ಹಂಜಿ ಮಾತನಾಡಿ, ವಿಜ್ಞಾನವು ನಾವು ಬದುಕುವ ವಿಧಾನವನ್ನು ನಿಜವಾಗಿಯೂ ಬದಲಾಯಿಸಿದೆ. ಮೂಢನಂಬಿಕೆ ಬದಿಗಿರಿಸಿದೆ ಮತ್ತು ಅಂತಿಮವಾಗಿ ನಮಗೆ ಮೊದಲಿಗಿಂತ ಉತ್ತಮ ಜೀವನ ನಡೆಸಲು ಸಹಾಯ ಮಾಡಿದೆ ಎಂದರು.

ಪ್ರಾಚಾರ್ಯ ವಿಜಯ ಕಲ್ಮಠ ಮಾತನಾಡಿ, ವಿಜ್ಞಾನದಿಂದ ಅನೇಕ ಅದ್ಭುತ ಆವಿಷ್ಕಾರಗಳು ನಡೆದಿವೆ. ಈಗ ಅಸಾಧ್ಯವಾದ ಕೆಲಸಗಳೂ ಸಾಧ್ಯವಾಗುತ್ತಿವೆ. ವಿಜ್ಞಾನದ ಅದ್ಭುತಗಳಲ್ಲಿ ಒಂದು ವಿದ್ಯುತ್​ ಆವಿಷ್ಕಾರವೂ ಒಂದು ಎಂದು ತಿಳಿಸಿದರು. ಸ್ಥಳಿಯ ಆಡಳಿತ ಮಂಡಳಿ ಸದಸ್ಯರಾದ ಬಿ.ವಿ. ಹೊಂಡದಕಟ್ಟಿ, ಸಿ.ಎಸ್​. ಕೊಡೋಳಿ, ಜೆ.ಬಿ. ಹೊಸಮನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net