

ಅರಸೀಕೆರೆ: ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.
ಶಾಲೆಯ ಚೇರ‌್ಮನ್ ಆರ್.ಅನಂತಕುಮಾರ್ ಮಾತನಾಡಿ, ಮುಂದಿನ ಪೀಳಿಗೆಗೆ ಅವಶ್ಯವಿರುವ ಹಾಗೂ ರೈತ ಸಮುದಾಯಕ್ಕೆ ನೆರವಾಗುವ ವಿಜ್ಞಾನ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕೌಶಲಗಳನ್ನು ಪ್ರಸ್ತುತಪಡಿಸಲು ವೇದಿಕೆ ಒದಗಿಸಲಾಗಿದೆ. ಸೃಜನಶೀಲ ಹಾಗೂ ವೈಜ್ಞಾನಿಕ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಸುರೇಶ್‌ಕುಮಾರ್ ಕುಂದೂರು, ನಿರ್ದೇಶಕರಾದ ಪ್ರಶಾಂತ್, ಅಭಿನಿತ ಪ್ರಶಾಂತ್, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳು ವಿಜ್ಞಾನದ ಮಾದರಿಗಳ ಪ್ರದರ್ಶಿಸಿದರು. ವಿಶಿಷ್ಟ ಮಾದರಿಗಳು ವಿಜ್ಞಾನ ಆಸಕ್ತರ ಗಮನ ಸೆಳೆದವು.
ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿರುವುದು.