ಅಪ್ಪಾಜಿ ಗುರುಕುಲದಲ್ಲಿ ಮಕ್ಕಳ ಪ್ರತಿಭಾವರಣ

2412 KLB 08
Published on

ಕಲಬುರಗಿ: ಶಾಲೆಗಳಲ್ಲಿ ಪಠ್ಯದ ಜತೆಗೆ ವಿಜ್ಞಾನ, ಕೃಷಿ ಸೇರಿ ಇತರ ಚಟುವಟಿಕೆಗಳಲ್ಲಿ ತೊಡಗಿಸಿ, ಜ್ಞಾನ ನೀಡಬೇಕು. ಇದರಿಂದ ಮೌಲ್ಯಗಳು ಬೆಳೆಯುವ ಜತೆಗೆ ಕೌಶಲ ವೃದ್ಧಿಯಾಗುತ್ತದೆ ಎಂದು ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ದ ಶಿವಾಚಾರ್ಯರು ನುಡಿದರು.

ನಗರದ ಉದನೂರು ರಸ್ತೆ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿe್ಞÁನ ವಸ್ತು ಪ್ರದರ್ಶನ ಹಾಗೂ ಆರೋಗ್ಯ ತಪಾಸಣೆ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆ ಜತೆಗೆ ಇತರ ವಿಷಯಗಳನ್ನು ತಿಳಿಸಿದಾಗ ಭವ್ಯ ಭಾರತದ ಪ್ರಜೆಗಳನ್ನು ರೂಪಿಸಲು ಸಾಧ್ಯ. ಶಿಕ್ಷಕರು ಈ ನಿಟ್ಟಿನಲ್ಲಿ ಮಕ್ಕಳೊಂದಿಗೆ ಬೆರೆತು ಚಟುವಟಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಅಲ್ಲಂಪ್ರಭು ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳನ್ನು ಪ್ರತಿಭಾವಂತರನ್ನಾಗಿಸಲು ವಿಜ್ಞಾನ, ಕೃಷಿ ಪ್ರದರ್ಶನಗಳು ಪೂರಕವಾಗಿವೆ. ಶಿಕ್ಷಕರು, ಸಂಸ್ಥೆ ಆಡಳಿತ ಮಂಡಳಿಯ ಪರಿಶ್ರಮ, ವಿಶೇಷ ಆಸಕ್ತಿಯಿಂದ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಬಸಯ್ಯ ಮಠಪತಿ ಶರಣರಾಜ್ ಚಪ್ಪರ್‌ಬಂಧಿ, ಶ್ರೀಶೈಲ ನಾಗರಾಳ, ಲಾಲ್ ಅಹ್ಮದ್, ಸಂಸ್ಥೆ ಅಧ್ಯಕ್ಷೆ ಭಾಗಮ್ಮ ಉದನೂರ, ಆಡಳಿತ ಅಧಿಕಾರಿ ಗುರು ಸಾಲಿಮಠ, ಶಿಕ್ಷಕರಾದ ಅಭಿಲಾಶಾ, ಶರಣಯ್ಯ ಸ್ವಾಮಿ, ಲತಾ, ಕಾವ್ಯ, ಶಾಂತಾ, ಜ್ಯೋತಿ, ಭಾಗ್ಯಶ್ರೀ, ಮಾಲಾಶ್ರೀ ಇತರರಿದ್ದರು. ಸಂಸ್ಥೆ ಕಾರ್ಯದರ್ಶಿ ರಾಜಕುಮಾರ ಉದನೂರು ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಸ್ವಾತಿ ನಿರೂಪಣೆ ಮಾಡಿದರು. ಶಿಕ್ಷಕಿ ನತಾಶಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net