ಪ್ರಶಂಸೆಗೆ ಪಾತ್ರವಾದ ವಿಜ್ಞಾನ ಮಾದರಿ ಪ್ರದರ್ಶನ

IMG-20230805-WA0017.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಎಂ.ಆರ್. ಸಾಖರೆ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾಥಿರ್ಗಳಿಗಾಗಿ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

90ಕ್ಕೂ ಹೆಚ್ಚಿನ ಗುಂಪುಗಳಲ್ಲಿ ವಿದ್ಯಾಥಿರ್ಗಳು ತಾವು ತಯಾರಿಸಿದ ರೋಬೋಟ್, ಡ್ರೋಣ್, ಗ್ರಹಣಗಳ ಮಾದರಿ, ಸೌರಮಂಡಲ, ಚಪ್ಪಾಳೆಯ ಸ್ವಿಚ್ ಬೋರ್ಡ್, ಮಾಲಿನ್ಯ ನಿಯಂತ್ರಣ, ಹನಿ ನೀರಾವರಿ, ಮಳೆ ನೀರಿನ ಸಂಗ್ರಹ, ರಾಕೆಟ್, ಜ್ವಾಲಾಮುಖಿ ಹೀಗೆ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.

ಪಿ.ಸಿ. ಜಾಬಿನ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಆಸಿಫಾ, ಪರಿಸರ ವಿಜ್ಞಾನ ವಿಭಾಗದ ಲಿಂಗರಾಜ, ಪ್ರೇರಣಾ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಚಾರ್ನ್, ಬಿಬಿಎ ಕಾಲೇಜಿನ ಮಹೇಶ ಹುಡೇದ ಇತರರು ಪಾಲ್ಗೊಂಡು ಮಾದರಿಗಳನ್ನು ವೀಕ್ಷಿಸಿದರು. ಮಕ್ಕಳ ಕ್ರಿಯಾಶೀಲತೆಯನ್ನು ಪ್ರಶಂಸಿಸಿದರು.

ಪ್ರಾಂಶುಪಾಲ ಡಾ. ಶೀತಲ್ ತಿವಾರಿ ಅವರ ಮಾರ್ಗದರ್ಶನದಲ್ಲಿ ವಿಜ್ಞಾನ ಶಿಕ್ಷಕರಾದ ವಾಣಿ ಮಠ, ಡಿ. ಶಲೋಮ್, ಮಹೇಶ್ವರಿ ಎಚ್, ಪ್ರಿಯಾ ಎಲ್. ಹಾಗೂ ನಾಗರಾಜ ಇವರ ನೇತೃತ್ವದಲ್ಲಿ ಸಿಬ್ಬಂದಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net