

ಮಹಾಲಿಂಗಪುರ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಾಣಿಜ್ಯ ಸಂಭ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಸುವ ಸ್ಪರ್ಧೆ, ನೃತ್ಯ, ಗಾಯನ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಜ್ಞಾನ ವಸ್ತು ಪ್ರದರ್ಶನಕ್ಕೆ ಪ್ರಥಮ 4 ಸಾವಿರ, ದ್ವಿತೀಯ 3,ತತೀಯ 2, ಚತುರ್ಥ 1 ಸಾವಿರ ರೂ. ಬಹುಮಾನ, ನತ್ಯ, ಗಾಯನ, ಭಾಷಣ ಸ್ಪರ್ಧೆಗೆ ನಗದು ಬಹುಮಾನ ನೀಡಲಾಗುವುದು.
ಬೆಳಗ್ಗೆ 10.30ಕ್ಕೆ ಕೆಎಲ್‌ಇ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ವಸ್ತು ಪ್ರದರ್ಶನ ಉದ್ಘಾಟಿಸುವರು. ನಿರ್ದೇಶಕ ಜಯಾನಂದ ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಐ.ಕುಂದಗೋಳ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಆಡಳಿತ ಮಂಡಳಿ ಸದಸ್ಯ ಬಸವರಾಜ ಡಳಾಪೂರ, ಸಂತೋಷ ಹುದ್ದಾರ, ಡಾ.ಪ್ರವೀಣ ಪಾಶ್ಚಾಪೂರ, ಮುಖ್ಯಗುರು ಐ.ಜಿ.ಯರಗಾಣಿ, ಎಸ್.ಬಿ.ಮಲಾಬಾದಿ, ಧನಂಜಯ ಕುಲಕರ್ಣಿ ಭಾಗವಹಿಸುವರು.
ಕಾರ್ಯಕ್ರಮದ ಮಾಹಿತಿಯ ಕರಪತ್ರ ಬಿಡುಗಡೆಗೊಳಿಸಲಾಯಿತು. ಪ್ರಾಚಾರ್ಯ ಎಲ್.ಬಿ.ತುಪ್ಪದ, ಪ್ರೌಢಶಾಲೆ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಎಂ.ಬಿ.ತೇಲ್ಕರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಜಿ.ವೈ.ಕಿತ್ತೂರ, ಆರ್.ಎನ್.ಪಟ್ಟಣಶೆಟ್ಟಿ, ಒಕ್ಕೂಟದ ಅಧ್ಯಕ್ಷ ಎಸ್.ವಿ.ಸಿದ್ನಾಳ, ಆರ್.ಎಸ್.ಕಲ್ಲೋಳಿ ಇದ್ದರು.