ಮಕ್ಕಳ ಪ್ರತಿಭಾಂಕುರಕ್ಕೆ ವಿಜ್ಞಾನ ಮೇಳ ಸಹಕಾರಿ

6 Dwd 5
Published on

ಧಾರವಾಡ: ಮಕ್ಕಳಲ್ಲಿಯ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ವಿಜ್ಞಾನ ಮೇಳ, ಗಣಿತ ಮೇಳ ಬಹಳ ಉಪಯುಕ್ತ. ಮಕ್ಕಳು ತಯÁರಿಸಿದ ಮÁದರಿಗಳು ವಿಸ್ಮಿತಗೊಳಿಸುವಂತಿವೆ ಎಂದು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಹೇಳಿದರು.
ನಗರದ ಪವನ ಆಂಗ್ಲ ಮÁಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ಮೇಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಇರುವಿಕೆಯನ್ನು ಸಾರುವ ಪ್ರದರ್ಶನಗಳು ಗಮನ ಸೆಳೆದವು. ಚಂದ್ರಯÁನ ೩ರ ಮÁದರಿ, ಹನಿ ನೀರಾವರಿ ವ್ಯವಸ್ಥೆ, ಭೂಕಂಪ ಪತ್ತೆಕಾರಕ, ಹೃದಯದ ಕಾರ್ಯವೈಖರಿ ಸೇರಿ ಹಲವು ಪ್ರಾಯೋಗಿಕ ಮÁದರಿಗಳನ್ನು ಪ್ರದರ್ಶಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ರತ್ನಾ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಿಜ್ಞಾನ ವಿಭಾಗದ ಮಂತ್ರಿ ಅಂಕಿತ ಹಿರೇಮಠ ನಿರೂಪಿಸಿದರು.
ಪ್ರಾಚಾರ್ಯ ವಿಕ್ರಮ ಮಹಾಶಬ್ದೆ, ಮುಖ್ಯ ಸಂಯೋಜಕಿ ಸವಿತಾ ಕಂಬಿ, ವಿಜ್ಞಾನ ವಿಭಾಗದ ಮುಖ್ಯ ಶಿಕ್ಷಕಿ ಪುಷ್ಪಲತಾ ಹಾಗೂ ಶಾಲಾ ಪ್ರಧಾನಮಂತ್ರಿಗಳಾದ ನಂದೀಶ, ಅನಘ, ಇತರರಿದ್ದರು. ತಾನಿಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net