

ಕೆ.ಆರ್.ಸಾಗರ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಿಂಗರಾಜು ಚಾಲನೆ ನೀಡಿದರು.
ಕಾಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿಆರ್‌ಪಿ ಜ್ಯೋತಿಲಕ್ಷ್ಮೀ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ತಾಲೂಕಿನ ಎರಡು ಪ್ರೌಢಶಾಲೆಯನ್ನು ಆಯ್ಕೆ ಮಾಡಿ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಇಂದಿನ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿವಹಿಸಿ ಇದರ ಬಗ್ಗೆ ಕಲಿಕೆ ಮುಂದುವರಿಸವುದು ಹಾಗೂ ಮುಂದಿನ ದಿನಗಳಲ್ಲಿ ವಿಜ್ಞಾನದಲ್ಲಿ ಅವಿಷ್ಕಾರ ಉಂಟುಮಾಡಲಿ ಎಂಬುದು ಇದರ ಉದ್ದೇಶವಾಗಿದೆ. ಇದರಿಂದ ಮಕ್ಕಳಲ್ಲಿನ ವಿಜ್ಞಾನದ ಪ್ರತಿಭೆ ಹೊರಬರಲಿದೆ. ಈ ವಸ್ತುಪ್ರದರ್ಶನವನ್ನು ಶಾಲೆಯ ಎಲ್ಲ ಮಕ್ಕಳು ಸೇರಿದಂತೆ ಸಮೀಪದ ಶಾಲೆಗಳ ಮಕ್ಕಳು ವೀಕ್ಷಣೆ ಮಾಡಿ ಮಾಹಿತಿ ಪಡೆಯಲು ಅವಕಾಶ ನೀಡಲಾಗಿದೆ ಎಂದರು.
ಕಾರ್ಯಕ್ರದಲ್ಲಿ ಉಪಪ್ರಾಂಶುಪಾಲ ಉಮೇಶ್ವರ, ಇಸಿಒ ನಂಜುಂಡಚಾರ್, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶಚಾರಿ ಇದ್ದರು.