

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜ್ಞಾನವು ಜೀವನದ ಎಲ್ಲ ರಂಗಗಳಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಹೊಸ ಆಲೋಚನೆ ಹಾಗೂ ಅನ್ವೇಷಣಾ ಮನೋಭಾವ ಬೆಳೆಯಲು ವಿಜ್ಞಾನ ವಸ್ತು ಪ್ರದರ್ಶನ ಅವಶ್ಯಕ. ಇಂತಹ ಹೊಸ ಹೊಸ ಆವಿಷ್ಕಾರಗಳ ಲೋಕವನ್ನು ನಗರದ ಕ್ಲಾಸಿಕ್ ಶಾಲೆ ಮಕ್ಕಳು ಶಾಲಾ ಆವರಣದಲ್ಲಿ ಶುಕ್ರವಾರ ಮನೋಜ್ಞವಾಗಿ ಪ್ರದಶಿರ್ಸಿದರು.
ಐಐಟಿಯ ಪ್ರೊ. ಡಾ. ಎಸ್.ಎಂ. ಶಿವಪ್ರಸಾದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದುವ ಮೂಲಕ ಹೊಸ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು ಎಂದು ಅವರು, ಮಕ್ಕಳಲ್ಲಿನ ಅನ್ವೇಷಣಾ ಭಾವನೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಡಾ. ಎಂ.ವೈ.ಸಾವಂತ, ಶಾಲೆ ಅಧ್ಯ ಲಕ್ಷ್ಮಣ ಉಪ್ಪಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕ್ಲಾಸಿಕ್ ಶಾಲೆ ಮುಖ್ಯೋಪಾಧ್ಯಾಯ ಮನೋಹರ ಕೆಂಚರಾಹುತ್, ಸಂಧ್ಯಾರಾಣಿ, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.