ಬಿಜಿಎಸ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

28-02--2025--krs1 (4)
ಹುಲಿಕೆರೆ ಗ್ರಾಮದಲ್ಲಿನ ಬಿ.ಜಿ.ಎಸ್ ಬಾಲಜಗತ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮುಖ್ಯ ಶಿಕ್ಷಕಿ ಆಶಾ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
Published on

ಕೆ.ಆರ್.ಸಾಗರ: ಹುಲಿಕೆರೆಯ ಕೆ.ಆರ್.ಸಾಗರ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಹಲವಾರು ಮಾದರಿಗಳನ್ನು ನಿರ್ಮಿಸಿ, ಅವುಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.

ಮುಖ್ಯಶಿಕ್ಷಕಿ ಆಶಾ.ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನ ಕುರಿತು ಅರಿವು ಮೂಡಿಸಲು ಮತ್ತು ಅವರಲ್ಲಿನ ಪ್ರತಿಭೆ ಹೊರ ತರಲು ಈ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದರು.

ರಾಕೇಟ್ ಉಡಾವಣೆ, ಚಂದ್ರಯಾನ, ಗಾಳಿ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ, ಪರಿಸರ ಸಂರಕ್ಷಣೆ ಹಾಗೂ ಕಾಳಜಿ, ಅರಣ್ಯ ಮತ್ತು ಪ್ರಾಣಿಗಳು, ಸೋಲಾರ್ ಸಿಸ್ಟಂ, ಗ್ರೀನ್ ಹೌಸ್, ನೀರು ಶುದ್ಧೀಕರಣ, ಕೃಷಿ, ಮಾನವನ ದೇಹ, ಸೂರ್ಯನ ಚಲನವಲನ, ಅಣೆಕಟ್ಟೆ ನಿರ್ಮಾಣ, ಭೂಕಂಪ ಎಚ್ಚರಿಕೆ ಘಂಟೆ, ಲೈಟ್‌ಹೌಸ್, ವಿಮಾನ ಟರ್ಮಿನಲ್, ಕಾಡು, ಪಕ್ಷಿ ಉದ್ಯಾನವನ ಸೇರಿದಂತೆ ಹಲವು ಮಾದರಿಗಳು ಗಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net